Select Your Language

Notifications

webdunia
webdunia
webdunia
webdunia

ವಿಕೆಂಡ್‌ನಲ್ಲಿ ತಿಂಡಿ ತಿನ್ನುತ್ತ ಸಂಗೀತ ಕೇಳಿ | ತಿಂಡಿ ಪೋತರ ಹಬ್ಬ

ವಿಕೆಂಡ್‌ನಲ್ಲಿ ತಿಂಡಿ ತಿನ್ನುತ್ತ ಸಂಗೀತ ಕೇಳಿ | ತಿಂಡಿ ಪೋತರ ಹಬ್ಬ
ಬೆಂಗಳೂರು , ಗುರುವಾರ, 4 ಅಕ್ಟೋಬರ್ 2018 (19:48 IST)
ಬೆಂಗಳೂರು: ಈ ವಿಕೆಂಡ್ ಹೇಗೆ ಕಳೆಯೋದಂತಾ ಯೋಚನೆ ಮಾಡ್ತಿದಿರಾ ಹಾಗಾದರೆ ಇದೇ ಶುಕ್ರವಾರ ದಿಂದ ಮೂರು ದಿನಗಳ ಕಾಲ ಫ್ರೀಡಂ ಪಾರ್ಕ್‌ಗೆ ಭೆಟ್ಟಿ ಕೊಟ್ಟು ನಿಮಗಿಷ್ಟವಾದ ಆಹಾರ ಸವಿಯುತ್ತ ಸಂಗೀತ ಮತ್ತು ನೃತ್ಯವನ್ನು ಆನಂದಿಸಿರಿ.
ಕಲಾ ಪ್ರೀಯರು ಮತ್ತು ತಿಂಡಿ ಪ್ರೀಯರಿಗೆ ಒಂದೇ ಸೂರಿನಡಿ ಮನತಣಿಸಲು ವಿಕ್ಷಣಾ ವೆಂಚರ್ ಸಂಸ್ಥೆ ತಿಂಡಿ ಪೋತರ ಹಬ್ಬವನ್ನು ಆಯೋಜಿಸಿದೆ.
 
“ತಿಂಡಿ ಪೋತರ ಹಬ್ಬಕ್ಕೆ” ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಅವರು ಚಾಲನೆ ನೀಡಲಿದ್ದು ಅತಿಥಿಗಳಾಗಿ ವಿಧಾನ ಪರಿಷತ್ತಿನ ಸದಸ್ಯ ಶರವಣ, ಸಂಸದ ಪಿ.ಸಿ.ಮೋಹನ್, ನಿವೃತ್ತ ಐ.ಪಿ.ಎಸ್ ಅಧಿಕಾರಿ ಶಂಕರ ಬಿದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
 
 ಇದೇ ಅಕ್ಟೋಬರ್ 5 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಆಹಾರ ಮೇಳದಲ್ಲಿ ಆಹಾರ ಮನರಂಜನೆ ಕಿರುಚಿತ್ರ ಪ್ರದರ್ಶನ ಸೇರಿದಂತೆ ಹಲವಾರು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ.
 
ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಆಹಾರ ಮಳಿಗೆಗಳಿದ್ದು 1000ಕ್ಕೂ ಹೆಚ್ಚು ತಿಂಡಿ ಮತ್ತು ತಿನಿಸುಗಳು ಸಾಂಪ್ರದಾಯಿಕ ಆಹರ, ದಕ್ಷಿಣ ಭಾರ, ಉತ್ತರ ಭಾರತದ ವಿವಿಧ ದೇಸಿ ಮತ್ತು ವಿದೇಶಿ ಆಹಾರಗಳು ತಿಂಡಿ ಪ್ರೀಯರನ್ನು ತಮ್ಮತ್ತ ಸೇಳೆಯಲು ಸಜ್ಜಾಗಿವೆ. ಪ್ರತಿಯೊಂದು ಮಳಿಗೆಯಲ್ಲಿ ವಿಭಿನ್ನವಾದ ಆಹಾರ ಪದಾರ್ಥಗಳು ದೊರೆಯುವುದು ಈ ಹಬ್ಬದ ವಿಶೇಷ.
 
ಸಂಸ್ಕೃತಿಕ ಕಾರ್ಯಕ್ರಮ
 
ಖಾತ ಡ್ರಮ್ಮರ್ ದೇವಾ, ಖ್ಯಾತ ವಯೋಲಿನ್ ವಾದಕ ವಿದ್ಯಾಶಂಕರ, ಇಂಡಿಯನ್ ಪ್ಯಾರಾ ಸ್ವಿಮ್ಮರ್ ಕೆ.ಎಸ್ ವಿಶ್ವಾಸ ಹಾಗೂ ಮಿಸ್ಟರ್ ಬ್ಯಾಲನ್ಸರ್ ಎಂದೇ ಖಾತರಾಗಿರುವ ನಿಶ್ಚಲ್ ನಾರಾಯಣ, ಡ್ರ್ಯಾಗನ್ ಡಾನ್ಸ್, ಪಂಜಾಬಿ ಭಾಂಗಡಾ ಸೇರಿದಂತೆ ಹಲವು ಮನರಂಜನೆ ಕಾರ್ಯಕ್ರಮಗಳು ಗ್ರಾಹಕ/ಪ್ರೇಕ್ಷಕರ ಮನಸೂರೆಗೊಳ್ಳಲಿವೆ. ಸಾಮಾಜಿಕ ಕಳಕಳಿವುಳ್ಳ ತಿಂಡಿ ಪಾತ್ರೆಯೆಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿ ದಿನ ಸಂಜೆ ಉಳಿಯುವ ಆಹಾರ ಪದಾರ್ಥಗಳನ್ನು ಅಲ್ಲಿ ಸಂಗ್ರಹಿಸಿಟ್ಟು ಅಗತ್ಯವಿರುವವರಿಗೆ ಉಚಿತವಾಗಿ ಹಂಚಲಾಗುವುದು.
 
ನೋ ಫುಡ್ ವೆಸ್ಟೆಜ್ ಎಂಬ ಪರಿಕಲ್ಪನೆಯ ಕಿರುಚಿತ್ರಗಳನ್ನು ಆಹ್ವಾನಿಸಲಾಗಿದ್ದು ೩ ಅತ್ಯುತ್ತಮ ಕಿರು ಚಿತ್ರಗಳಿಗೆ ಈ ಸಂದಭದಲ್ಲಿ ಪ್ರಶಸ್ತಿ ನೀಡಿ ಗೌರವವಿಸಲಾಗುವುದು.
 
ಮಾಧ್ಯಮ ಸಂಪರ್ಕ : ದೀಪಕ್ +8660605954

Share this Story:

Follow Webdunia kannada

ಮುಂದಿನ ಸುದ್ದಿ

ಸ್ವದೇಸಿ ಶಾಪಿಂಗ್ ಮತ್ತು ಆಹಾರ ಮೇಳ” ಆಕ್ಟೊಬರ್ 5,6,7 ರಂದು