Select Your Language

Notifications

webdunia
webdunia
webdunia
webdunia

ನೀವು ಸೇವಿಸುವ ಈ ಆಹಾರಗಳಿಂದಲೇ ಮಲಬದ್ಧತೆ ಬರಬಹುದು!

ನೀವು ಸೇವಿಸುವ ಈ ಆಹಾರಗಳಿಂದಲೇ ಮಲಬದ್ಧತೆ ಬರಬಹುದು!
ಬೆಂಗಳೂರು , ಭಾನುವಾರ, 7 ಅಕ್ಟೋಬರ್ 2018 (08:23 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಲಬದ್ಧತೆ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಅದಕ್ಕೆ ನಾವು ಸೇವಿಸುವ ಆಹಾರವೂ ಕಾರಣ.

ಬಾಳೆಹಣ್ಣು
ಬಾಳೆಹಣ್ಣು ಸೇವನೆಯಿಂದ ಮಲಬದ್ಧತೆ ದೂರವಾಗುತ್ತದೆ ಎನ್ನಲಾಗುತ್ತದೆ. ಆದರೆ ಸರಿಯಾದ ಹಣ್ಣಾಗದ ಬಾಳೆಹಣ್ಣು ಸೇವನೆ ಮಲಬದ್ಧತೆಗೆ ಕಾರಣವಾಗಬಹುದು!

ರೆಡ್ ಮೀಟ್
ರೆಡ್ ಮೀಟ್ ನಲ್ಲಿ ಕೊಬ್ಬಿನಂಶ ಅಧಿಕವಿದ್ದು, ಮಲಬದ್ಧತೆಗೆ ಕಾರಣವಾಗಬಹುದು. ಇದರಲ್ಲಿ ಕರಗುವ ನಾರಿನಂಶ ಕಡಿಮೆ ಇರುವುದರಿಂದ ಜೀರ್ಣಕ್ರಿಯೆ ಕಠಿಣ.

ಸಂಸ್ಕರಿತ ಆಹಾರ
ಸಂಸ್ಕರಿತ ಆಹಾರಗಳಲ್ಲಿ ನಾರಿನಂಶ ಕಡಿಮೆಯಿರುತ್ತದೆ. ಇದರಲ್ಲಿ ಕೊಬ್ಬಿನಂಶ ಮತ್ತು ಉಪ್ಪಿನಂಶ ಅಧಿಕವಿರುತ್ತದೆ. ಅಲ್ಲದೆ ಇಂತಹ ಆಹಾರ ಸೇವನೆ ದೇಹದಲ್ಲಿ ನೀರಿನಂಶ ಕಡಿಮೆಮಾಡುತ್ತದೆ. ಇದರಿಂದ ಸಹಜವಾಗಿ ಮಲಬದ್ಧತೆ ಬರುತ್ತದೆ.

ಮದ್ಯಪಾನ
ಮದ್ಯಪ್ರಿಯರು ಹದವಾಗಿ ಸೇವನೆ ಮಾಡುವುದರಿಂದ ಸಮಸ್ಯೆಯಾಗಲ್ಲ. ಆದರೆ ಓವರ್ ಡ್ರಿಂಕ್ಸ್ ಯಾವತ್ತಿಗೂ ಅಪಾಯವೇ. ಅತಿಯಾಗಿ ಮದ್ಯ ಸೇವನೆ ಮಾಡುವುದರಿಂದ ದೇಹ ನಿರ್ಜಲೀಕರಣಕ್ಕೊಳಗಾಗುತ್ತದೆ. ಇದರಿಂದ ಸಹಜವಾಗಿಯೇ ಮಲಬದ್ಧತೆ ಬರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಗುಪ್ತಾಂಗದ ಈ ಸಮಸ್ಯೆಗಳಿಗೆ ಕಾರಣವೇನು?