Select Your Language

Notifications

webdunia
webdunia
webdunia
webdunia

ಪಾರ್ಶ್ವವಾಯು (ಲಕ್ವ) ರೋಗ ಬರದಂತೆ ತಡೆಗಟ್ಟಲು ಈ ಒಂದನ್ನು ಪ್ರತಿನಿತ್ಯ ಸೇವಿಸಿದರೆ ಸಾಕು

ಪಾರ್ಶ್ವವಾಯು (ಲಕ್ವ) ರೋಗ ಬರದಂತೆ ತಡೆಗಟ್ಟಲು ಈ ಒಂದನ್ನು ಪ್ರತಿನಿತ್ಯ ಸೇವಿಸಿದರೆ ಸಾಕು
ಬೆಂಗಳೂರು , ಭಾನುವಾರ, 7 ಅಕ್ಟೋಬರ್ 2018 (09:07 IST)
ಬೆಂಗಳೂರು : ಸಾಮಾನ್ಯವಾಗಿ  ಮನುಷ್ಯನಿಗೆ ವಯಸ್ಸಾದಂತೆ ರೋಗಗಳು ಆವರಿಸಿಕೊಳ್ಳುತ್ತದೆ. ಇದರಲ್ಲಿ ಪಾರ್ಶ್ವವಾಯು (ಲಕ್ವ) ಕೂಡ ಒಂದು. ಈ ರೋಗ ಬಂದರೆ ವ್ಯಕ್ತಿಗೆ ಯಾವುದೇ ಕೆಲಸಗಳನ್ನು ಮಾಡಲು ಆಗುದಿಲ್ಲ. ಈ ಪಾರ್ಶ್ವವಾಯು (ಲಕ್ವ) ಬರದಂತೆ ತಡೆಗಟ್ಟಬೇಕಾದರೆ ಮಧ್ಯ ವಯಸ್ಕರು ಹಾಗೂ ಹಿರಿಯರು ಸೇರಿದಂತೆ ಎಲ್ಲರೂ ನಿತ್ಯ ಈ ಒಂದನ್ನು ಸೇವಿಸಿದರೆ ಸಾಕಂತೆ.


ಹೌದು.. ಎಲ್ಲರೂ ನಿತ್ಯ ಮೊಟ್ಟೆ ಸೇವಿಸುವುದರಿಂದ ಪಾರ್ಶ್ವವಾಯು (ಲಕ್ವ) ರೋಗದಿಂದ ದೂರವಿರಬಹುದು ಎಂಬ ಕುತೂಹಲಕಾರಿ ಅಂಶವನ್ನು ವಿಜ್ಞಾನಿಗಳು ಹೊರ ಹಾಕಿದ್ದಾರೆ. ಅಮೆರಿಕದ ಖ್ಯಾತ ಆಹಾರ ವಿಜ್ಞಾನಿ ಹಾಗೂ ಎಪಿಡ್ ಸ್ಟ್ಯಾಟ್ ಇನ್ಸ್ ಟಿಟ್ಯೂಟ್ ನ ಹಿರಿಯ ಪ್ರಾಧ್ಯಾಪಕ ಡಿ.ಅಲೆಕ್ಸಾಂಡರ್ ಅವರು ಈ ಬಗ್ಗೆ ಸುಧೀರ್ಘ ಸಂಶೋಧನೆ ನಡೆಸಿ ಅದರ ವರದಿಯನ್ನು ಹೊರಹಾಕಿದ್ದಾರೆ


ಅಲೆಕ್ಸಾಂಡರ್ ಅವರ ನೂತನ ವರದಿಯಂತೆ ವ್ಯಕ್ತಿಯೋರ್ವ ನಿತ್ಯ ಒಂದೊಂದು ಮೊಟ್ಟೆ ಸೇವಿಸುತ್ತಾ ಬಂದರೆ ಅಂತಹ ವ್ಯಕ್ತಿ ಪಾರ್ಶ್ವವಾಯು ರೋಗದಿಂದ ದೂರವಿರುತ್ತಾನಂತೆ. ಅಲೆಕ್ಸಾಂಡರ್ ಅವರು 1982 ರಿಂದ 2015ರ ವರೆಗೆ ಸುಧೀರ್ಘ ಅಧ್ಯಯನ ಕೈಗೊಂಡು ತಮ್ಮ ವರದಿಯನ್ನು ನೀಡಿದ್ದಾರೆ. ಅದರಂತೆ ಈ ಸುಧೀರ್ಘ ಅವಧಿಯಲ್ಲಿ ಯಾವ ವ್ಯಕ್ತಿಗಳು ನಿತ್ಯ ಮೊಟ್ಟೆ ಸೇವಿಸುತ್ತಾ ಬಂದಿದ್ದಾರೆಯೋ ಅವರು ಪಾರ್ಶ್ವವಾಯು ರೋಗದಿಂದ ಮುಕ್ತರಾಗಿದ್ದರಂತೆ.


ಮೊಟ್ಟೆಯಲ್ಲಿರುವ ವಿಶಿಷ್ಠ ಮತ್ತು ಯಥೇಚ್ಛ ಪ್ರೊಟೀನ್ ಗಳು ಮಾನವನ ದೇಹ ಮತ್ತು ಮೆದುಳಿನ ಆರೋಗ್ಯವನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿ ಸಹಕರಿಸುತ್ತವೆಯಂತೆ. ಪ್ರಮುಖವಾಗಿ ಮೊಟ್ಟೆ ಮಾನವನ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ, ಇ ಮತ್ತು ಎ ಅಂಶಗಳನ್ನು ಪೂರೈಸುತ್ತದೆಯಂತೆ. ಇದಲ್ಲದೆ ಮೊಟ್ಟೆಯ ಹಳದಿ ಭಾಗ ಮಾನವನ ದೇಹಕ್ಕೆ ಅಗತ್ಯವಾದ ಆ್ಯಂಟಿ ಆಕ್ಸಿಡೆಂಟ್, ಜೀಕ್ಸಾಂಥಿನ್ ಅಂಶಗಳನ್ನು ಪೂರೈಸುತ್ತದೆಯಂತೆ. ಅದರಂತೆ ನಿತ್ಯ ಮೊಟ್ಟೆ ತಿನ್ನುವುದರಿಂದ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವನ್ನು ಶೇ.12ರಷ್ಟು ದೂರವಿಡಬಹುದು ಎಂದು ಅಲೆಕ್ಸಾಂಡರ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಗಾಗ ನಿದ್ರೆ ಮಾಡುವುದು ಒಳ್ಳೆಯದು! ಹೇಗೆ?