Publish Date: Thu, 21 Mar 2019 (19:51 IST)
Updated Date: Thu, 21 Mar 2019 (19:53 IST)
ಇದು ತಂಪಿನ ಗುಣವುಳ್ಳದ್ದು, ಜ್ವರ ಹಾಗೂ ವಾತರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ ಕೈ ಮತ್ತು ಪೌಷ್ಠಿಕ ಗುಣಗಳನ್ನು ಹೊಂದಿದೆ. ಹೊಟ್ಟೆ ಉಬ್ಬರ, ಹೊಟ್ಟೆಮುರಿತ ನಿವಾರಣೆಯಾಗುವುದು ಮತ್ತು ಜೀರ್ಣಶಕ್ತಿ ಹೆಚ್ಚಿಸುತ್ತದೆ.
ಬೇಕಾಗುವ ಪದಾರ್ಥಗಳು:
15-20 ದೊಡ್ಡಪತ್ರೆ ಎಲೆಗಳು
ಅರ್ಧ ಟೀಸ್ಪೂನ್ ಜೀರಿಗೆ
ಅರ್ಧ ಟೀಸ್ಪೂನ್ ಕಾಳು ಮೆಣಸು
ಅರ್ಧ ಕಪ್ ತೆಂಗಿನತುರಿ
1 ಕಪ್ ಮೊಸರು
1 ಅಥವಾ 2 ಒಣಮೆಣಸಿನಕಾಯಿ
2 ಟೀಸ್ಪೂನ್ ಅಡುಗೆ ಎಣ್ಣೆ
ಕಾಲು ಟೀಸ್ಪೂನ್ ಸಾಸಿವೆ
ಉಪ್ಪು ರುಚಿಗೆ ತಕ್ಕಷ್ಟು
ತಂಬುಳಿ ಮಾಡವ ವಿಧಾನ:
ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಿಸಿ, ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿಯಿರಿ. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಸೊಪ್ಪು ಹಾಕಿ. ಸೊಪ್ಪು ಬಾಡಿದ ಕೂಡಲೇ ತೆಂಗಿನತುರಿ ಹಾಕಿ. ಹುರಿದ ಎಲೆ, ಜೀರಿಗೆ ಮತ್ತು ಕಾಳುಮೆಣಸು ಮಿಕ್ಸಿ ಜಾರಿಗೆ ಹಾಕಿ ತೆಂಗಿನ ತುರಿಯೊಂದಿಗೆ ರುಬ್ಬಿರಿ. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ, ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಹಾಕಿ.