Daily Horoscope

Select Your Language

Notifications

webdunia
webdunia
webdunia
webdunia

ರುಚಿಕರವಾಗಿ ಗಿರಮಿಟ್ಟು ತಯಾರಿಸುವುದು ಹೇಗೆ?

ಗಿರಮಿಟ್ಟು
ಸಾಯಂಕಾಲವಾದರೆ ಬಾಯಾಡಿಸಲು ಏನಾದರೂ ತಿನ್ನಲು ಬೇಕು ಎಂದು ಅನ್ನಿಸುವುದು ಸಹಜ. ಹಾಗಾಗಿ ಚಹಾದೊಂದಿಗೆ ರುಚಿಕರವಾಗಿ ಗಿರಮಿಟ್ಟನ್ನು ತಯಾರಿಸಿಕೊಂಡು ಸವಿಯಬಹುದು. 
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಮಂಡಕ್ಕಿ 1/4 ಕೆಜಿ
* ಟೊಮೆಟೊ 2
* ಈರುಳ್ಳಿ 2
* ಹಸಿಮೆಣಸು 4 
* ಬೆಳ್ಳುಳ್ಳಿ 2 ಎಸಳು
* ಕೊತ್ತಂಬರಿ ಸೊಪ್ಪು 1 ಹಿಡಿ
* ಹುರಿಗಡಲೆ ಪುಡಿ 4 ಚಮಚ
* ಎಣ್ಣೆ 3 ಚಮಚ
* ಕರಿಬೇವು 8 ರಿಂದ 10 ಎಲೆಗಳು
* ಉಪ್ಪು ರುಚಿಗೆ ತಕ್ಕಷ್ಚು
 
   ತಯಾರಿಸುವ ವಿಧಾನ:
    ಮೊದಲು ಟೊಮೆಟೊ, ಈರುಳ್ಳಿ, ಹಸಿಮೆಣಸನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಕರಿಬೇವು, ಬೆಚ್ಚಿದ ಟೊಮೆಟೊ, ಈರುಳ್ಳಿ, ಹಸಿಮೆಣಸು, ಜಜ್ಜಿಕೊಂಡ ಬೆಳ್ಳುಳ್ಳಿ ಉಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ನಂತರ ಮಸಾಲೆಯು ಆರಿದ ಮೇಲೆ ಈ ಮಸಾಲೆಯನ್ನು ಮಂಡಕ್ಕಿ ಜೊತೆಗೆ ಸೇರಿಸಿ ಚೆನ್ನಾಗಿ ತಿರುವಬೇಕು. ಇದನ್ನು ಪ್ಲೇಟ್‌ಗೆ ಹಾಕಿದೆ ಮೇಲೆ ಹುರಿಗಡಲೆ ಪುಡಿ, ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಉದರಿಸಿಕೊಂಡರೆ ರುಚಿಕರವಾದ ಗಿರಮಿಟ್ಟು ಸವಿಯಲು ಸಿದ್ದ. 

Share this Story:

Follow Webdunia kannada

ಮುಂದಿನ ಸುದ್ದಿ

ಹೈಪೋಥೈರಾಯಿಡ್: ಹೆಚ್ಚಿರುವ ದೇಹದ ತೂಕವನ್ನು ಹೀಗೆ ಇಳಿಸಿಕೊಳ್ಳಿ.