Select Your Language

Notifications

webdunia
webdunia
webdunia
webdunia

ಮಾವಿನ ಹಣ್ಣಿನ ಶಿರಾ (ಕೇಸರಿಬಾತ್)

ಮಾವಿನ ಹಣ್ಣಿನ ಶಿರಾ (ಕೇಸರಿಬಾತ್)
ಬೆಂಗಳೂರು , ಸೋಮವಾರ, 18 ಮಾರ್ಚ್ 2019 (16:12 IST)
ಹಣ್ಣುಗಳ ರಾಜನೇ ಆಗಿರುವ ಮಾವಿನ ಹಣ್ಣನ್ನು ನೆನೆಸಿಕೊಂಡರೇ ಬಾಯಲ್ಲಿ ನೀರೂರುತ್ತದೆ. ಇನ್ನು ಮಾವಿನ ಹಣ್ಣಿನ ಖಾದ್ಯಗಳೋ ಒಂದಕ್ಕಿಂತ ಒಂದು ರುಚಿ. ಮಾವಿನ ಕಾಯಿನಿಂದ ಉಪ್ಪಿನಕಾಯಿ, ಗೊಜ್ಜು, ತಂಬುಳಿಯನ್ನು ಮಾಡಿ ಸವಿದರೆ ಇನ್ನು ಮಾವಿನ ಹಣ್ಣಿನಿಂದ ಹಪ್ಪಳ, ರಸಾಯನ ಹೀಗೆ ಒಂದೇ ಎರಡೇ. ಹಾಗೆಯೇ ಮಾವಿನಹಣ್ಣನ್ನು ಹಾಕಿ ಶಿರಾವನ್ನು ಮಾಡಿಕೊಂಡು ಸವಿಯಬಹುದು.
  
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ರವಾ 1 ಕಪ್
* ನೀರು 2 ಕಪ್
* ಹಾಲು 1 ಕಪ್
* ಸಕ್ಕರೆ ಒಂದೂಕಾಲು ಕಪ್
* ತುಪ್ಪ 1/3 ಕಪ್
* ಸಣ್ಣಗೆ ಹೆಚ್ಚಿದ ಮಾವಿನಹಣ್ಣು 1/2 ಕಪ್
* ಗೋಡಂಬಿ 8 ರಿಂದ 10
* ಕುಂಕುಮ ಕೇಸರಿ 10 ರಿಂದ 10 ದಳಗಳು
* ಚಿಟಿಕೆಯಷ್ಟು ಉಪ್ಪು
 
   ತಯಾರಿಸುವ ವಿಧಾನ:
   ಮೊದಲು ಕೇಸರಿಯನ್ನು ಎರಡು ಚಮಚ ಬಿಸಿ ಹಾಲಿನಲ್ಲಿ ನೆನೆಸಿಡಬೇಕು. ನಂತರ ಬಾಣಲೆಗೆ ತುಪ್ಪವನ್ನು ಹಾಕಿ ರವೆಯನ್ನು ಹಾಕಿ ಚೆನ್ನಾಗಿ ಹುರಿಯಬೇಕು. ರವೆಯು ಸ್ವಲ್ಪ ಕೆಂಪಾಗಿ ಘಮ್ಮನೆ ಸುವಾಸನೆ ಬಂದರೆ ರವಾ ಹುರಿದಿದೆ ಎಂದರ್ಥ. ರವೆಯನ್ನು ಹುರಿಯುತ್ತಿರುವಾಗಲೇ ನೀರು ಮತ್ತು ಹಾಲನ್ನು ಸೇರಿಸಿ ಕುದಿಯಲು ಇಡಬೇಕು. ನಂತರ ಹುರಿದ ರವೆಗೆ ಕುದಿಯುತ್ತಿರುವ ನೀರು ಮತ್ತು ಹಾಲನ್ನು ಹಾಕಿ ಕಲಕುತ್ತಾ ಬರಬೇಕು. ನಂತರ ರವೆ ಹುರಿಯುತ್ತಿರುವ ಒಲೆಯನ್ನು ಸಣ್ಣ ಉರಿಯಲ್ಲಿಟ್ಟು ಅದಕ್ಕೆ ನೆನೆಸಿಟ್ಟ ಕೆಸರಿ ದಳಗಳು, ಹೆಚ್ಚಿದ ಮಾವಿನಹಣ್ಣು, ಗೋಡಂಬಿ ಚೂರುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳವನ್ನು ಮುಚ್ಚಿ ಒಂದೆರಡು ನಿಮಿಷ ಬೇಯಲು ಬಿಡಬೇಕು.

ರವೆ ಬೆಂದ ನಂತರ ಸಕ್ಕರೆ ಉಪ್ಪನ್ನು ಹಾಕಿ ಕಲುಕುತ್ತಾ ಬರಬೇಕು. ಸಕ್ಕರೆಯನ್ನು ಹಾಕಿದೆ ಮೇಲೆ ಸತ್ತೆ ಸ್ವಲ್ಪ ನೀರು ಬಿಟ್ಟುಕೊಳ್ಳುತ್ತದೆ. ನಂಚರ ಮಿಶ್ರಣವು ಬಾಣಲೆಗೆ ಅಂಟಿಕೊಳ್ಳದಂತೆ ಸೌಟು ಮತ್ತು ಬಾಣಲೆಯನ್ನು ಬಿಡುವವರೆಗೂ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಮಿಶ್ರಣವು ಬಾಣಲೆ ಅಂಚನ್ನು ಬಿಟ್ಟ ಮೇಲೆ ಉರಿಯನ್ನು ಆರಿಸಿ. ಹಾಗೆ ಮಾಡಿದರೆ ಬಿಸಿಬಿಸಿಯಾದ ರುಚಿಯಾದ ಮಾವಿನಹಣ್ಣಿನ ಶಿರಾ ಸವಿಯಲು ಸಿದ್ಧ. 

Share this Story:

Follow Webdunia kannada

ಮುಂದಿನ ಸುದ್ದಿ

ಸುಡು ಬೇಸಿಗೆಗೆ ನಾವು ಮರೆಯದೇ ಸೇವಿಸಬೇಕಾಗಿರುವ ಆಹಾರಗಳಿವು