Publish Date: Mon, 18 Mar 2019 (13:39 IST)
Updated Date: Mon, 18 Mar 2019 (13:40 IST)
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಇಂದಿರಾ ಕ್ಯಾಂಟಿನ್ ನಲ್ಲಿ ತಯಾರಾಗುವ ಆಹಾರವು ವಿಷಯುಕ್ತವಾಗಿದೆ ಎಂಬ ಮಾಹಿತಿ ಇದೀಗ ತಿಳಿದುಬಂದಿದೆ.
ಬಿಬಿಎಂಪಿ ಉಮೇಶ್ ಎಂಬುವವರು ಇಂದಿರಾ ಕ್ಯಾಂಟಿನ್ ನಲ್ಲಿ ತಯಾರು ಮಾಡುವ ಊಟ ತಿನ್ನಲು ಯೋಗ್ಯವಾಗಿಲ್ಲ , ಬೆಂಗಳೂರಿನಲ್ಲಿ ಸರಿ ಸುಮಾರು 16 ಸಾವಿರ ಪೌರ ಕಾರ್ಮಿಕರಿಗೆ ನೀಡುವ ಇಂದಿರಾ ಕ್ಯಾಂಟಿನ್ ಊಟವು ವಿಷಯುಕ್ತವಾಗಿದೆ ಎನ್ನುವ ಆರೋಪ ಮಾಡಿದ್ದಾರೆ. ಅಲ್ಲದೇ, ಈ ಆಹಾರವನ್ನು ಖಾಸಗಿ ಹಾಗೂ ಸರಕಾರದ ಆಹಾರ ಪರೀಕ್ಷಾ ಕೇಂದ್ರದಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಪರೀಕ್ಷೆ ಮಾಡಿದ ವೇಳೆಯಲ್ಲಿ ಇಂದಿರಾ ಕ್ಯಾಂಟಿನ್ ನಲ್ಲಿ ಪೌರ ಕಾರ್ಮಿಕರಿಗೆ ನೀಡುತ್ತಿರುವ ಊಟ ತಿನ್ನಲು ಯೋಗ್ಯವಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಇನ್ನು ಈ ಆಹಾರವನ್ನು ಸೇವನೆ ಮಾಡಿದರೆ ವಾಂತಿ, ಭೇದಿಯಾಗುವುದು ಖಚಿತ ಒಂದು ವೇಳೆ ಇಂಥಹ ಆಹಾರವನ್ನು ತಿನ್ನುತ್ತ ಹೋದರೆ ಮನುಷ್ಯ ಸಾವನ್ನಪ್ಪುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ. ಇದರಿಂದ ಇಂದಿರಾ ಕ್ಯಾಂಟಿನ್ ನಲ್ಲಿ ಊಟ ಮಾಡುವವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.