Select Your Language

Notifications

webdunia
webdunia
webdunia
webdunia

ಬೇಸಿಗೆಯಲ್ಲಿ ಸಪೋಟ ತಿನ್ನಲೇಬೇಕಾದ ಹಣ್ಣು...ಏಕೆಂದರೆ?

ಬೇಸಿಗೆಯಲ್ಲಿ ಸಪೋಟ ತಿನ್ನಲೇಬೇಕಾದ ಹಣ್ಣು...ಏಕೆಂದರೆ?
ಬೆಂಗಳೂರು , ಸೋಮವಾರ, 18 ಮಾರ್ಚ್ 2019 (16:43 IST)
ಸಪೋಟ ಹಣ್ಣನ್ನು ಇಷ್ಟಪಡದಿರುವವರು ಯಾರೂ ಇಲ್ಲ. ಇದರಲ್ಲಿ ಅನೇಕ ವಿಧವಾದ ಗುಣಗಳು ಅಡಗಿ ಕೊಂಡಿವೆ. ಯಾವಾಗಲಾದರೂ ಆಯಾಸವಾಗಿರುವಾಗ ಒಂದು ಸಪೋಟ ಹಣ್ಣನ್ನು ತಿಂದು ನೋಡಿ, ಕೆಲವು ನಿಮಿಷಗಳಲ್ಲಿಯೆ ಆಯಾಸ ಸ್ವಲ್ಪ ಕಡಿಮೆಯಾಗುತ್ತದೆ. ಇದರಲ್ಲಿ ಪ್ರಕ್ಟೋಜ್, ಸುಕ್ರೋಜ್, ಸಕ್ಕರೆ ಅಂಶ ಸಮೃದ್ದಿಯಾಗಿರುವುದೆ ಕಾರಣ. ರಕ್ತಹೀನತೆಯಿಂದ ಬಳಲುತ್ತಿರುವವರು ಸಪೋಟವನ್ನು ತಿನ್ನುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಸಪೋಟದಲ್ಲಿರುವ ಆರೋಗ್ಯ ಪ್ರಯೋಜನಗಳೇನೆಂದು ನೋಡೋಣ.
1. ಸಪೋಟ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ದೃಷ್ಟಿ ದೋಷಗಳು ಸಹ ದೂರವಾಗುತ್ತದೆ. ಪ್ರತಿದಿನ ಒಂದು ಸಪೋಟವನ್ನು ತಿನ್ನುತ್ತಾ ಬಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಶ್ವಾಸಕೋಶಕ್ಕೂ ಒಳ್ಳೆಯದು.
2. ಸಪೋಟದಲ್ಲಿ ರಕ್ತವೃದ್ಧಿ, ಪುಷ್ಠಿಯನ್ನು ನೀಡುವ ಅಂಶಗಳಲ್ಲದೆ ಎಷ್ಟೋ ಔಷಧೀಯ ಗುಣಗಳು ಇವೆ. ಅಷ್ಟೇ ಅಲ್ಲದೆ ಸಪೋಟಾದಲ್ಲಿ ಶರೀರಕ್ಕೆ ಅಗತ್ಯವಿರುವ ವಿಟಮಿನ್‌ಗಳು, ಖನಿಜಗಳು, ನಾರಿನಂಶ 
 
ಪದಾರ್ಥಗಳಿರುತ್ತವೆ. ಕ್ಯಾಲ್ಸಿಯಂ, ಪೋಟಾಷಿಯಂ, ಕೆರೊಟನಾಯ್ಡ್, ಪ್ರೊಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು, ಪಾಸ್ಪರಸ್ ಕೂಡಾ ಸಮೃದ್ಧಿಯಾಗಿರುತ್ತದೆ.
3. ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಸ್ ಗುಣಗಳು ಕೂಡಾ ಇದರಲ್ಲಿ ಹೆಚ್ಚಾಗಿವೆ. ಸಪೋಟಾದಲ್ಲಿ ವಿಟಮಿನ್ –ಎ, ವಿಟಮಿನ್- ಸಿ ಹೆಚ್ಚಾಗಿರುವುದರಿಂದ ಶರೀರಕ್ಕೆ ಆ್ಯಂಟಿ ಆಕ್ಸಿಡೆಂಟ್‌ಗಳು ಲಭಿಸುತ್ತವೆ.
 
4. ಸಪೋಟ ಮಲಬದ್ದತೆಯ ಸಮಸ್ಯೆಯನ್ನು ನಿವಾರಿಸುವುದರೊಂದಿಗೆ ಈ ಹಣ್ಣಿನಲ್ಲಿರುವ ರಸಾಯಾನಿಕಗಳು ಕರುಳಿನ ತುದಿಯ ತೆಳುವಾದ ಶ್ಲೇಷ್ಮ ಪೂರೆಯನ್ನು ರಕ್ಷಿಸುತ್ತದೆ.
 
5. ರಕ್ತಹೀನತೆಯಿಂದ ಬಳಲುತ್ತಿರುವರು, ಗರ್ಭಿಣಿಯರು, ವೃದ್ಧರು ಪ್ರತಿದಿನ ಸಪೋಟ ಹಣ್ಣನ್ನು ತಿಂದರೆ ಶರೀರಕ್ಕೆ ಅಗತ್ಯವಿರುವ ಕಬ್ಬಿಣಾಂಶವನ್ನು ಪೂರೈಸುತ್ತದೆ. ಇದರಲ್ಲಿರುವ ಪೋಟಾಷಿಯಂ, ಮೆಗ್ನೀಷಿಯಂ ಹೃದಯಕ್ಕೂ ಸಹ ಒಳ್ಳೆಯದು.

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಕರವಾಗಿ ಗಿರಮಿಟ್ಟು ತಯಾರಿಸುವುದು ಹೇಗೆ?