Webdunia - Bharat's app for daily news and videos

Install App

ಪನೀರ್ ಮ್ಯಾಗಿಯ ರುಚಿಯನ್ನು ಸವಿದಿದ್ದೀರಾ

Webdunia
ಗುರುವಾರ, 27 ಸೆಪ್ಟಂಬರ್ 2018 (15:43 IST)
ಸಾಮಾನ್ಯವಾಗಿ ಮ್ಯಾಗಿ ಪ್ಯಾಕ್ ತಂದು ಅದನ್ನು ಬಿಸಿ ನೀರಿನಲ್ಲಿ ಅದನ್ನು ಹಾಕಿ ಗರಂ ಮಸಾಲಾ ಹಾಕಿ ಬೇಯಿಸಿ ಬಿಸಿಬಿಸಿಯಾಗಿ ಸೇವಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಪನೀರ್ ಹಾಕಿ ತಯಾರಿಸುವ ಮ್ಯಾಗಿಯ ರುಚಿಯೇ ಬೇರೆ ತರಹದ್ದಾಗಿರುತ್ತದೆ. ಅದನ್ನು ಬಲು ಸುಲಭವಾಗಿಯೂ ತಯಾರಿಸಬಹುದು. ಅದನ್ನು ಹೇಗೆ ಅಂತಾ ತಿಳಿಸಿಕೊಡ್ತೀವಿ.. ಒಮ್ಮೆ ನೀವೂ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು :
* ಮ್ಯಾಗಿ 2 ಪ್ಯಾಕೆಟ್
* ಈರುಳ್ಳಿ 2
* ದುಂಡು ಮೆಣಸಿನ ಕಾಯಿ 1 
* ಟೊಮೆಟೊ 1 
* ಕ್ಯಾರೆಟ್
* ಪನ್ನೀರ್ ಸ್ವಲ್ಪ
* ಹಸಿಮೆಣಸಿನಕಾಯಿ 2
* ಬೆಳ್ಳುಳ್ಳಿ ಎಸಳು 2
* ಜೀರಿಗೆ ಅರ್ಧ ಚಮಚ
* ಪುದೀನಾ ಪುಡಿ 1 ಚಮಚ
* ಎಣ್ಣೆ 2 ಚಮಚ
* ನೀರು 2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
 ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಬೇಕು. ಎಣ್ಣೆ ಬಿಸಿಯಾದಾಗ ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿಯನ್ನು ಹಾಕಿ ಹುರಿಯಬೇಕು. ನಂತರ ದುಂಡು ಮೆಣಸಿನಕಾಯಿ ಮತ್ತು ಕ್ಯಾರೆಟ್ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು. ಆಮೇಲೆ ಹಸಿ ಮೆಣಸಿನಕಾಯಿ ಮತ್ತು ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೂ ಹುರುಯಬೇಕು. ನಂತರ ಪನ್ನೀರ್ ಹಾಕಿ ಹುರಿದ ನಂತರ 2 ಕಪ್ ನೀರು ಹಾಕಬೇಕು. ನಂತರ ನೀರು ಕುದಿ ಬರುವಾಗ ಅದಕ್ಕೆ ಮ್ಯಾಗಿಯ ಮಸಾಲೆ ಪುಡಿ ಮತ್ತು ಪುದೀನಾ ಪುಡಿ ಹಾಕಿ ಚಿಟಿಕೆಯಷ್ಟು ಉಪ್ಪು ಹಾಕಿ ನೀರು ಕುದಿ ಬಂದ ಮೇಲೆ ಮ್ಯಾಗಿ ಹಾಕಿ ಬೇಯಿಸಿದರೆ ರುಚಿ ರುಚಿಯಾದ ಬಿಸಿ ಬಿಸಿಯಾದ ಪನ್ನೀರ್ ಮ್ಯಾಗಿ ಸವಿಯಲು ಸಿದ್ಧ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments