Select Your Language

Notifications

webdunia
webdunia
webdunia
webdunia

ಸುಲಭವಾಗಿ ಮಾಡಬಹುದಾದ ಕೊತ್ತಂಬರಿ ಸೊಪ್ಪಿನ ಒಡೆ

ಸುಲಭವಾಗಿ ಮಾಡಬಹುದಾದ ಕೊತ್ತಂಬರಿ ಸೊಪ್ಪಿನ ಒಡೆ
ಬೆಂಗಳೂರು , ಸೋಮವಾರ, 24 ಸೆಪ್ಟಂಬರ್ 2018 (17:23 IST)
ಕೊತ್ತಂಬರಿ ಸೊಪ್ಪು ಸಾಮಾನ್ಯವಾಗಿ ಎಲ್ಲಾ ಆಹಾರ ಪದಾರ್ಧಗಳಲ್ಲಿಯೂ ಬಳಕೆಯಾಗುತ್ತವೆ. ಕೊತ್ತಂಬರಿ ಸೊಪ್ಪನ್ನು ಸುಮ್ಮನೆ ಆಹಾರ ಪದಾರ್ಥದ ಮೇಲೆ ಉದುರಿಸಿದರೂ ರುಚಿಯೇ ಬೇರೆ. ಕೆಲವೊಮ್ಮೆ ಅಲಂಕಾರಿಕವಾಗಿಯೂ ಕೊತ್ತಂಬರಿ ಸೊಪ್ಪು ಬಳಕೆಯಾಗುತ್ತದೆ. ಕೊತ್ತಂಬರಿ ಸೊಪ್ಪಿನಿಂದ ಒಡೆಯನ್ನೂ ಸಹ ಮಾಡಬಹುದು. ಹೇಗೆ ಅಂತಾ ಹೇಳ್ತೀವಿ.. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು :
 
ಉದ್ದಿನ ಬೇಳೆ 2 ಕಪ್
ಹಸಿ ಮೆಣಸಿನಕಾಯಿ 4 ರಿಂದ 5
ಶುಂಠಿ ಸ್ವಲ್ಪ
ಕೊತ್ತಂಬರಿ ಸೊಪ್ಪು 1 ಕಟ್ಟು
ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ 2
ಸ್ವಲ್ಪ ಕರಿಬೇವು
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ
 
ಮಾಡುವ ವಿಧಾನ :
 
ಮೊದಲು ಉದ್ದಿನಬೇಳೆಯನ್ನು 3 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ನೀರನ್ನು ತೆಗೆದು ಅದಕ್ಕೆ ಹಸಿ ಮೆಣಸಿನಕಾಯಿ, ಶುಂಠಿಯ ಜೊತೆಗೆ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಉಪ್ಪನ್ನು ಈಗಾಗಲೇ ರುಬ್ಬಿಕೊಂಡ ಹಿಟ್ಟಿನೊಂದಿಗೆ ಚೆನ್ನಾಗಿ ಕಲೆಸಬೇಕು.

ನಂತರ ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಹಿಟ್ಟನ್ನು ತೆಗೆದುಕೊಂಡು ಒತ್ತಿ ವೃತ್ತಾಕಾರ ಮಾಡಿ ಅದರ ಮಧ್ಯಭಾಗದಲ್ಲಿ ಒಂದು ಸಣ್ಣ ರಂಧ್ರ ಮಾಡಿ ವಡೆಯನ್ನು ಎರಡೂ ಕಡೆ ಹೊಂಬಣ್ಣಕ್ಕೆ ಬರುವವರೆಗೆ ಕರಿಯಬೇಕು. ಈಗ ರುಚಿ ರುಚಿಯಾದ ಕೊತ್ತಂಬರಿ ಸೊಪ್ಪಿನ ವಡೆ ಸವಿಯಲು ಸಿದ್ಧ. ಇದನ್ನು ಚಟ್ನಿಯೊಂದಿಗೆ ಸವಿಯಬಹುದು. 

Share this Story:

Follow Webdunia kannada

ಮುಂದಿನ ಸುದ್ದಿ

ಸವಿಯಾದ ತುಪ್ಪದ ಚಿರೋಟಿ ಮಾಡಿ ಸವಿಯಿರಿ