Select Your Language

Notifications

webdunia
webdunia
webdunia
webdunia

ಸ್ವಾದಿಷ್ಠವಾದ ಮೊಘಲೈ ಫಿಶ್ ಕರಿ

ಸ್ವಾದಿಷ್ಠವಾದ ಮೊಘಲೈ ಫಿಶ್ ಕರಿ
ಬೆಂಗಳೂರು , ಗುರುವಾರ, 27 ಸೆಪ್ಟಂಬರ್ 2018 (15:38 IST)
ಬೇಕಾಗುವ ಸಾಮಗ್ರಿಗಳು:
 
300 ಗ್ರಾಂ - ಸ್ವಚ್ಛಗೊಳಿಸಿದ ಮೀನಿನ ತುಂಡು
1 ಕಪ್ - ಹಾಲು
1/2 ಕಪ್ - ಎಣ್ಣೆ
2 - ಈರುಳ್ಳಿ
4 - ಎಸಳು ಬೆಳ್ಳುಳ್ಳಿ
2 ಚಮಚ - ಕೊತ್ತಂಬರಿ ಬೀಜಗಳು
3 ಚಮಚ - ಕೆಂಪು ಮೆಣಸಿನ ಪುಡಿ
3 ಚಮಚ - ಮೊಸರು
1 ಚಮಚ - ಗರಮ್ ಮಸಾಲಾ ಪುಡಿ
3 ಚಮಚ - ಗಸಗಸೆ
2 ಇಂಚು - ಶುಂಠಿ
1 ಚಮಚ - ಮೆಣಸುಕಾಳು (ಕರಿ ಮೆಣಸು)
2 ಚಮಚ - ಜೀರಿಗೆ ಬೀಜ
8 - ಬಾದಾಮಿ
1 ಚಮಚ - ಅರಿಶಿಣ
ಉಪ್ಪು
1 ಚಮಚ - ಲಿಂಬೆ ರಸ
 
ಮಾಡುವ ವಿಧಾನ:
 
* ಒಂದು ಪಾತ್ರೆಯಲ್ಲಿ ಸ್ವಚ್ಛಗೊಳಿಸಿದ ಮೀನಿನ ತುಂಡು, ಅರಿಶಿಣ, ಲಿಂಬೆ ರಸ ಮತ್ತು ಉಪ್ಪು ಸೇರಿಸಿ 40 ನಿಮಿಷ ಮ್ಯಾರಿನೇಟ್ ಮಾಡಿ.
 
* ಗಸಗಸೆಗೆ ಸ್ವಲ್ಪ ನೀರು ಸೇರಿಸಿ ಬಿಸಿ ಮಾಡಿ.
 
* ಒಂದು ಮಿಕ್ಸಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಮೆಣಸುಕಾಳು, ಜೀರಿಗೆ, ಕೊತ್ತಂಬರಿ ಬೀಜ, ಅರಿಶಿಣ, ಕೆಂಪು ಮೆಣಸಿನ ಪುಡಿ, ಬಾದಾಮಿ, ಬಿಸಿ ಮಾಡಿದ ಗಸಗಸೆಗೆ ಮತ್ತು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ.
 
* ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಮ್ಯಾರಿನೇಟ್ ಮಾಡಿದ ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ ಎರಡೂ ಬದಿಯಲ್ಲಿ ಹುರಿದು, ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ, ಹಸಿ ವಾಸನೆ ಹೋಗುವ ತನಕ ಕುದಿಸಿ.
 
* ನಂತರ ಅದಕ್ಕೆ ಮೊಸರು ಮತ್ತು ಗರಮ್ ಮಸಾಲಾ ಪುಡಿಯನ್ನು ಹಾಕಿ ಸೌಟಾಡಿಸಿ.
 
* ನಂತರ ಹಾಲು ಹಾಕಿ ಬೇಯಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರ ಹಾಗೂ ಆರೋಗ್ಯಕರವಾಗ ವಿಶಿಷ್ಟವಾದ ಮೊಘಲೈ ಫಿಶ್ ಕರಿ ಅನ್ನದ ಜೊತೆ ಸವಿಯಲು ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಡಪತ್ರೆಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?