ಸ್ವಾದಿಷ್ಠವಾದ ಎಗ್ ದೋಸೆ

ಮಂಗಳವಾರ, 21 ಆಗಸ್ಟ್ 2018 (17:30 IST)
ಬೇಕಾಗುವ ಸಾಮಗ್ರಿಗಳು
ದೋಸೆ ಹಿಟ್ಟು - 1 ಕಪ್
ಮೊಟ್ಟೆ - ಪ್ರತಿ ದೋಸೆಗೆ ಒಂದು
ತುಪ್ಪ - 2 ಚಮಚ
ಖಾರ ಪುಡಿ - 1/2 ಚಮಚ
ಉಪ್ಪು- ರುಚಿಗೆ ತಕ್ಕಂತೆ
1 ಹಸಿರು ಮೆಣಸಿನಕಾಯಿ - ಚಿಕ್ಕದಾಗಿ ಹೆಚ್ಚಿದ್ದು
ಈರುಳ್ಳಿ - 1 ಚಿಕ್ಕದಾಗಿ ಹೆಚ್ಚಿದ್ದು
1/4 ಚಮಚ ತುರಿದ ಶುಂಠಿ
1 ಚಮಚ ಕೊತ್ತಂಬರಿ ಸೊಪ್ಪು
ಟೊಮೆಟೊ - 1 ಚಿಕ್ಕದಾಗಿ ಹೆಚ್ಚಿದ್ದು (ಐಚ್ಛಿಕ)
ಮಾಡುವ ವಿಧಾನ
 
- ತವಾಗೆ ತುಪ್ಪ ಸವರಿ ದೋಸೆ ಹಿಟ್ಟು ಸುರಿದು, ಅದರ ಮೇಲೆ ಮೊಟ್ಟೆ ಸುರಿದು ಚೆನ್ನಾಗಿ ಸವರಿ, ಅದರ ಮೇಲೆ ಸ್ವಲ್ಪ ಖಾರ ಪುಡಿ ಮತ್ತು ಉಪ್ಪು ಸಿಂಪಡಿಸಿ, ಹೆಚ್ಚಿದ ಹಸಿರು ಮೆಣಸಿನಕಾಯಿ, ಈರುಳ್ಳಿ, ಸ್ವಲ್ಪ ತುರಿದ ಶುಂಠಿ, ಕೊತ್ತಂಬರಿ ಸೊಪ್ಪು, ಟೊಮೆಟೊ ಹಾಕಿ ಎರಡು ಬದಿಯಲ್ಲಿ ತುಪ್ಪ ಹಚ್ಚಿ ಹುರಿಯಿರಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಮ್ಮ ಥೈರಾಯ್ಡ್ ಆರೋಗ್ಯಕ್ಕೆ ಉತ್ತಮ ಆಹಾರಗಳು ಯಾವುವು ಎಂದು ನಿಮಗೆ ತಿಳಿದಿದೆಯೇ?