Select Your Language

Notifications

webdunia
webdunia
webdunia
webdunia

ಆಟವಾಡುತ್ತಿದ್ದ ಮಗು ಮಾಡಿಕೊಂಡ ಎಡವಟ್ಟು; ಕುಕ್ಕರ್ ನೊಳಗೆ ತಲೆ ಸಿಲುಕಿಕೊಂಡು ಒದ್ದಾಟ

ಆಟವಾಡುತ್ತಿದ್ದ ಮಗು ಮಾಡಿಕೊಂಡ ಎಡವಟ್ಟು; ಕುಕ್ಕರ್ ನೊಳಗೆ ತಲೆ ಸಿಲುಕಿಕೊಂಡು ಒದ್ದಾಟ
ಸೂರತ್ , ಬುಧವಾರ, 28 ಫೆಬ್ರವರಿ 2018 (12:21 IST)
ಸೂರತ್: ಸೂರತ್‍ನಲ್ಲಿರುವ ಪಂದೇಸಾರಾದಲ್ಲಿ 2 ವರ್ಷದ ಮಗುವಿನ ತಲೆ ಪ್ರೆಶರ್ ಕುಕ್ಕರ್ ನಲ್ಲಿ ಸಿಲುಕಿಕೋಂಡಿದ್ದು 12 ಗಂಟೆಗಳ ಬಳಿಕ ಮಗುವಿನ ತಲೆಯನ್ನ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.


ಪರಿ ಎಂಬ ಬಾಲಕಿ ಅಡುಗೆಮನೆಯಲ್ಲಿ ಪಾತ್ರೆಗಳ ಜೊತೆ ಆಟವಾಡುತ್ತಿದ್ದ ವೇಳೆ ಅಕಸ್ಮಿಕವಾಗಿ ಆಕೆಯ ತಲೆ ಕುಕ್ಕರ್ ನಲ್ಲಿ ಸಿಲುಕಿಕೊಂಡಿತ್ತು. ಜೋರಾಗಿ ಕಿರುಚುತ್ತಿದ್ದನ್ನು ಕೇಳಿದ ಪೋಷಕರು ಓಡಿ ಬಂದು ಮಗುವಿನ ತಲೆಗೆ ಸಿಕ್ಕಿಹಾಕಿಕೊಂಡಿದ್ದ  ಕುಕ್ಕರ್ ತೆಗೆಯಲು ಪ್ರಯತ್ನಿಸಿದ್ದಾರೆ. ನಂತರ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಫಲರಾಗಲಿಲ್ಲ.


ಕೊನೆಗೆ ಕಮ್ಮಾರ ಮಾತ್ರ ಈ ಕುಕ್ಕರ್ ತೆಗೆಯಲು ಸಾಧ್ಯ ಎಂದು ವೈದ್ಯರು ಬಾಲಕಿಯ ಪೋಷಕರಿಗೆ ತಿಳಿಸಿದ್ದರು. ನಂತರ ಮಗುವಿನ ಪೋಷಕರು ಕಮ್ಮಾರನ ಹತ್ತಿರ ಹೋಗಿದ್ದಾರೆ. ಅಲ್ಲಿ ಕಮ್ಮಾರ ಕುಕ್ಕರ್ ಕಟ್ ಮಾಡಿ ಸಿಲುಕಿಕೊಂಡಿದ್ದ ಮಗುವಿನ ತಲೆಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಕಾಶ್ ರೈಗೆ ತಿರುಗೇಟು ಕೊಟ್ಟ ಸಂಸದ ಪ್ರತಾಪ್ ಸಿಂಹ