Select Your Language

Notifications

webdunia
webdunia
webdunia
webdunia

ಪುಣೆಯಲ್ಲಿ ಮಹಾಮಳೆಗೆ ನಾಲ್ಕು ಬಲಿ, ಸಂಕಷ್ಟದಲ್ಲಿದ್ದವರ ಸ್ಥಳಾಂತರಕ್ಕೆ ಸಿಎಂ ಸೂಚನೆ

ಪುಣೆಯಲ್ಲಿ ಮಹಾಮಳೆಗೆ ನಾಲ್ಕು ಬಲಿ, ಸಂಕಷ್ಟದಲ್ಲಿದ್ದವರ ಸ್ಥಳಾಂತರಕ್ಕೆ ಸಿಎಂ ಸೂಚನೆ

Sampriya

ಪುಣೆ , ಗುರುವಾರ, 25 ಜುಲೈ 2024 (19:17 IST)
Photo Courtesy X
ಪುಣೆ: ಭಾರೀ ಮಳೆ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ಪುಣೆ, ಮುಂಬೈ, ಪಾಲ್ಘರ್, ಥಾಣೆ ಮತ್ತು ರಾಯಗಡ್‌ಗೆ ರೆಡ್ ಅಲರ್ಟ್ ಘೋಷಿಸಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ನಿರಂತರ ಸುರಿದ ಭಾರೀ ಮಳೆಗೆ ಭಾರೀ ಹಾನಿಯಾಗಿದ್ದು, ಪ್ರತ್ಯೇಕ ಘಟನೆಗಳಲ್ಲಿ ನಾಲ್ಕು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ನಗರದ ತಗ್ಗು ಪ್ರದೇಶಗಳಲ್ಲಿ ಹಲವಾರು ಮನೆಗಳು ಮತ್ತು ವಸತಿ ಸಮಾಜಗಳು ಜಲಾವೃತವಾಗಿದ್ದು ಅಲ್ಲಿನ ಜನರನ್ನು ಸ್ಥಳಾಂತರಿಸಲಾಗುತ್ತಿದೆ.

ಮಳೆ ಸಂಬಂಧ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಅಗತ್ಯವಿದ್ದರೆ ಮಳೆ ಪೀಡಿತ ಪ್ರದೇಶದಲ್ಲಿ ಸಂಕಷ್ಟದಲ್ಲಿರುವ ಜನರನ್ನು ಪುಣೆಯಲ್ಲಿ ವಿಮಾನದ ಮೂಲಕ ಶಿಫ್ಟ್ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಶಿಂಧೆ ಅವರು ಪುಣೆ ಜಿಲ್ಲಾಧಿಕಾರಿಗಳು ಮತ್ತು ನಗರ ಮತ್ತು ಅದರ ನೆರೆಯ ಪಿಂಪ್ರಿ ಚಿಂಚ್‌ವಾಡ್, ಕೈಗಾರಿಕಾ ಟೌನ್‌ಶಿಪ್‌ನಲ್ಲಿರುವ ನಾಗರಿಕ ಮಂಡಳಿಯ ಮುಖ್ಯಸ್ಥರೊಂದಿಗೆ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂಸಾಚಾರ ಹಬ್ಬಿರುವ ಬಾಂಗ್ಲಾದಿಂದ ಭಾರತಕ್ಕೆ ಬಂದ 4,315 ಭಾರತೀಯರು