Select Your Language

Notifications

webdunia
webdunia
webdunia
webdunia

ಮೊದಲ ಬಾರಿಗೆ ಸಂಸತ್ ನಲ್ಲಿ ಬಾಷಣ ಮಾಡಿದ ಕಂಗನಾ ರನೌತ್ ಹೇಳಿದ ವಿಚಾರವೇನು

Kangana Ranaut

Krishnaveni K

ನವದೆಹಲಿ , ಗುರುವಾರ, 25 ಜುಲೈ 2024 (16:38 IST)
ನವದೆಹಲಿ: ಇದೇ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರುವ ಬಾಲಿವುಡ್ ನಟಿ ಕಂಗನಾ ರನೌತ್ ಇಂದು ಮೊದಲ ಬಾರಿಗೆ ಸಂಸತ್ ನಲ್ಲಿ ಮಾತನಾಡಿದ್ದಾರೆ. ಮೊದಲ ಭಾಷಣದಲ್ಲೇ ಕಂಗನಾ ಹೇಳಿದ್ದೇನು?

ಕಂಗನಾ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಇದುವರೆಗೆ ಅವರಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಕಂಗನಾ ಮಾತನಾಡಿದ್ದು ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಿದ್ದಾರೆ.

‘ಮಂಡಿಯಲ್ಲಿ ಅನೇಕ ಕಲಾಕೃತಿಗಳು ಅಳಿವಿನ ಅಂಚಿನಲ್ಲಿದೆ. ಹಿಮಾಚಲ ಪ್ರದೇಶದಲ್ಲಿ ಕಥ್ ಕುಣಿ ಎಂಬ ಸ್ಥಳೀಯ ನಿರ್ಮಾಣ ಕಲಾಕೃತಿಯಿದೆ. ಕುರಿಗಳ ಚರ್ಮದಿಂದ ಬಟ್ಟೆ,ಜಾಕೆಟ್ ತಯಾರಿಸುತ್ತಾರೆ. ಇದು ಅಪರೂಪದ ಕಲಾಕೃತಿಯಾಗಿದ್ದು, ಇದನ್ನು ಪ್ರಚುರಪಡಿಸಲು ನಾವು ಕೆಲವು ಯೋಜನೆ ಕೈಗೆತ್ತಿಕೊಳ್ಳಬೇಕಾಗಿದೆ. ಮಾಂಡಿ ಕ್ಷೇತ್ರದ ಜಾನಪದ ಕಲೆ ಉಳಿಸಲು ನಾವು ಕೆಲಸ ಮಾಡಬೇಕಿದೆ. ಇಂದು ಮೊದಲ ಬಾರಿಗೆ ಮಂಡಿ ಕ್ಷೇತ್ರದ ಪರವಾಗಿ ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು’ ಎಂದು ಕಂಗನಾ ಹೇಳಿದ್ದಾರೆ.

ಕಂಗನಾ ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗಿದ್ದವರು. ಸಂಸದೆಯಾದ ಬಳಿಕವೂ ಅವರಿಗೆ ವಿಮಾನ ನಿಲ್ದಾಣದಲ್ಲಿ ಕಪಾಳ ಮೋಕ್ಷವಾದ ಘಟನೆ ಭಾರೀ ಸುದ್ದಿಯಾಗಿತ್ತು. ಇದೀಗ ಸಂಸತ್ ನಲ್ಲಿ ಮೊದಲ ಬಾರಿಗೆ ಮಾತನಾಡಿ ಸುದ್ದಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Darshan Thoogudeepa: ದರ್ಶನ್ ಗಿಲ್ಲ ಮನೆ ಊಟ: ಯಾವ ಸಂದರ್ಭದಲ್ಲಿ ಆರೋಪಿಗಳಿಗೆ ಮನೆ ಊಟಕ್ಕೆ ಕೋರ್ಟ್ ಅವಕಾಶ ನೀಡುತ್ತದೆ