Select Your Language

Notifications

webdunia
webdunia
webdunia
webdunia

ಯುವಕರಿಗೆ ಕೇಂದ್ರದ ಬಂಪರ್ ಯೋಜನೆ: ಮಾಸಿಕ 5 ಸಾವಿರ ಇಂಟರ್ನ್ ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು

Nirmala Sitharaman

Krishnaveni K

ನವದೆಹಲಿ , ಗುರುವಾರ, 25 ಜುಲೈ 2024 (09:35 IST)
ನವದೆಹಲಿ: ಮೊನ್ನೆಯಷ್ಟೇ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯುವಕರಲ್ಲಿ ಕೌಶಲಾಭಿವೃದ್ಧಿ ಹೆಚ್ಚಿಸಲು ಇಂಟರ್ನ್ ಶಿಪ್ ಯೋಜನೆಯೊಂದನ್ನು ಪ್ರಕಟಿಸಿದ್ದರು. ಇದಕ್ಕೆ ಯಾರು ಅರ್ಹರು ಎಂಬ ವಿವರ ಇಲ್ಲಿದೆ ನೋಡಿ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇದೂ ಒಂದಾಗಿದೆ. ಈ ಯೋಜನೆಯಲ್ಲಿ 21 ರಿಂದ 24 ವರ್ಷದೊಳಗಿನ ಯುವಕರಲ್ಲಿ 5 ವರ್ಷದೊಳಗೆ ಕೌಶಲಾಭಿವೃದ್ಧಿ ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ. ಯುವ ಸಮುದಾಯದಲ್ಲಿ ಉದ್ಯೋಗ ಕೌಶಲ್ಯ ಹೆಚ್ಚಿಸಲು ಇಂಟರ್ನ್ ಶಿಪ್ ಯೋಜನೆ ಜಾರಿಗೆ ತರಲಾಗಿದೆ.

ಅದರಂತೆ ಸರ್ಕಾರ 500 ಟಾಪ್ ಕಂಪನಿಗಳನ್ನು ಈ ಯೋಜನೆಯಲ್ಲಿ ಬಳಸಿಕೊಳ್ಳಲಿದೆ. ಇನ್ನೂ ಉದ್ಯೋಗ ಅರಸುತ್ತಿರುವ 21 ರಿಂದ 24 ವರ್ಷದೊಳಗಿನ ಯುವಕ/ಯುವತಿಯರಿಗೆ ಈ ಕಂಪನಿಗಳಲ್ಲಿ ಪ್ರಾಯೋಗಿಕವಾಗಿ ಉದ್ಯೋಗ ತರಬೇತಿ ನೀಡುವುದು ಯೋಜನೆಯ ಭಾಗವಾಗಿದೆ. ಅವರಿಗೆ ಮಾಸಿಕವಾಗಿ 5,000 ರೂ. ಮತ್ತು ವರ್ಷಕ್ಕೆ ಒಟ್ಟು 66,000 ರೂ. ಭತ್ಯೆ ಸಿಗಲಿದೆ. ಕಂಪನಿಗಳೂ ಉದ್ಯೋಗ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗೆ ತರಬೇತಿ ಜೊತೆಗೆ ಹೆಚ್ಚುವರಿಯಾಗಿ 6,000 ರೂ. ನೀಡಬೇಕಾಗುತ್ತದೆ. ಈ ಮೂಲಕ ಕೌಶಲ್ಯ ತರಬೇತಿ ಜೊತೆಗೆ ಪ್ರೋತ್ಸಾಹ ಧನವೂ ಸಿಗಲಿದೆ.

ಯೋಜನೆಗೆ ಯಾರು ಅರ್ಹರು
ಪದವಿ ಮುಗಿಸಿರುವ ಇನ್ನೂ ಉದ್ಯೋಗ ಅರಸುತ್ತಿರುವ 21 ರಿಂದ 24 ವರ್ಷದೊಳಗಿನ ಯುವ ಸಮೂಹ ಇದಕ್ಕೆ ಅರ್ಹರು. ಅವರು ಯಾವುದೇ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಕುಟುಂಬದ ಇತರೆ ಸದಸ್ಯರು ಸರ್ಕಾರೀ ಉದ್ಯೋಗಿಗಳಾಗಿರಬಾರದು. ಅಭ್ಯರ್ಥಿಗಳು ಐಐಟಿ, ಐಐಎಂ, ಸಿಎ, ಸಿಎಂಎ, ಐಐಎಸ್ಇಆರ್ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸ್ ಮಾಡಿರಬಾರದು. ಒಟ್ಟಾರೆಯಾಗಿ ಆರ್ಥಿಕವಾಗಿ ಹಿಂದುಳಿದ, ಉದ್ಯೋಗ ಗಿಟ್ಟಿಸಿಕೊಳ್ಳಲು ಕಷ್ಟಪಡುವ ವರ್ಗವನ್ನೇ ಗುರಿಯಾಗಿಟ್ಟುಕೊಂಡು ಈ ಯೋಜನೆ ತರಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದನದಲ್ಲೇ ಭರ್ಜರಿ ಊಟ, ಬ್ಲಾಂಕೆಟ್ ಹೊದ್ದು ಮಲಗಿದ ಬಿಜೆಪಿ ಶಾಸಕರು