Select Your Language

Notifications

webdunia
webdunia
webdunia
webdunia

ಬಜೆಟ್‌ನಿಂದ ತುಂಬಾ ಸಂತೋಷವಾಗಿದೆ: ಸಂಸದೆ ಕಂಗನಾ ರನೌತ್

ಬಜೆಟ್‌ನಿಂದ ತುಂಬಾ ಸಂತೋಷವಾಗಿದೆ: ಸಂಸದೆ ಕಂಗನಾ ರನೌತ್

Sampriya

ನವದೆಹಲಿ , ಮಂಗಳವಾರ, 23 ಜುಲೈ 2024 (19:48 IST)
ನವದೆಹಲಿ: ಭಾರತೀಯ ಜನತಾ ಪಕ್ಷದ ಸಂಸದೆ ಮತ್ತು ನಟಿ ಕಂಗನಾ ರನೌತ್ ಅವರು ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ 2024 ಅನ್ನು ಶ್ಲಾಘಿಸಿ, ಆರೋಗ್ಯಕರವಾದ ಬಜೆಟ್ ಎಂದು ಬಣ್ಣಿಸಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿಯಿಂದ ಸಂಸದೆಯಾಗಿರುವ ಕಂಗನಾ, ರಾಜ್ಯಕ್ಕೆ ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದ ಘೋಷಣೆಯನ್ನೂ ಉಲ್ಲೇಖಿಸಿದ್ದಾರೆ.

"ನಮಗೆ ಬಜೆಟ್‌ನಿಂದ ತುಂಬಾ ಸಂತೋಷವಾಗಿದೆ..." ಎಂದು ಅವರು ಹೇಳಿದರು. ಅವರು ಇನ್‌ಸ್ಟಾಗ್ರಾಂನಲ್ಲಿ ಬಿಜೆಪಿ ಸಂಸದರಾದ ಬಾನ್ಸುರಿ ಸ್ವರಾಜ್ ಮತ್ತು ರವಿ ಕಿಶನ್ ಅವರೊಂದಿಗೆ ತೆಗೆದುಕೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ.

"ಸಂಪೂರ್ಣ ಬಜೆಟ್ ಸಂಸತ್ತಿನ ಬಜೆಟ್ ಅಧಿವೇಶನ" ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಲೋಕಸಭೆಯಲ್ಲಿ ಬಜೆಟ್ ಭಾಷಣದಲ್ಲಿ ಸೀತಾರಾಮನ್ ಅವರು ಹಿಮಾಚಲ ಪ್ರದೇಶವು ಕಳೆದ ವರ್ಷ ಪ್ರವಾಹದಿಂದಾಗಿ ವ್ಯಾಪಕ ನಷ್ಟವನ್ನು ಅನುಭವಿಸಿದೆ ಎಂದು ಹೇಳಿದರು.

ಬಹುಪಕ್ಷೀಯ ಅಭಿವೃದ್ಧಿ ನೆರವಿನ ಮೂಲಕ ರಾಜ್ಯಕ್ಕೆ ಪುನರ್ ನಿರ್ಮಾಣ ಮತ್ತು ಪುನರ್ವಸತಿಗೆ ನಮ್ಮ ಸರ್ಕಾರ ನೆರವು ನೀಡಲಿದೆ ಎಂದು ಸಚಿವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರಕ್ಕೆ 15ಸಾವಿರ ಕೋಟಿ ನೀಡಿದ ಕೇಂದ್ರ, ಕರ್ನಾಟಕಕ್ಕೆ ನೀಡಿದ್ದು ಚೊಂಬು: ದಿನೇಶ್ ಗುಂಡೂರಾವ್