Select Your Language

Notifications

webdunia
webdunia
webdunia
webdunia

ಹಿಂಸಾಚಾರ ಹಬ್ಬಿರುವ ಬಾಂಗ್ಲಾದಿಂದ ಭಾರತಕ್ಕೆ ಬಂದ 4,315 ಭಾರತೀಯರು

ಹಿಂಸಾಚಾರ ಹಬ್ಬಿರುವ ಬಾಂಗ್ಲಾದಿಂದ ಭಾರತಕ್ಕೆ ಬಂದ 4,315 ಭಾರತೀಯರು

Sampriya

ನವದೆಹಲಿ , ಗುರುವಾರ, 25 ಜುಲೈ 2024 (19:03 IST)
Photo Courtesy X
ನವದೆಹಲಿ:  ಬಾಂಗ್ಲಾದೇಶದಲ್ಲಿ ಹಬ್ಬಿರುವ ಹಿಂಸಾಚಾರದಿಂದಾಗಿ ಕಳೆದ ನಾಲ್ಕು ದಿನಗಳಲ್ಲಿ 3,087 ವಿದ್ಯಾರ್ಥಿಗಳು ಸೇರಿದಂತೆ 4,315 ಭಾರತೀಯರು ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.

‌ಇಂಟಿಗ್ರೇಟೆಡ್ ಚೆಕ್ ಪಾಯಿಂಟ್‌ಗಳು (ಐಸಿಪಿಗಳು) ಮತ್ತು ಲ್ಯಾಂಡ್ ಕಸ್ಟಮ್ ಸ್ಟೇಷನ್ (ಎಲ್‌ಸಿಎಸ್) ಮೂಲಕ ಭಾರತಕ್ಕೆ ಪ್ರವೇಶಿಸಿದ ವಿದ್ಯಾರ್ಥಿಗಳಲ್ಲಿ 1,168 ನೇಪಾಳ, 41 ಬಾಂಗ್ಲಾದೇಶ, 66 ಭೂತಾನ್, ಇಬ್ಬರು ಮಾಲ್ಡೀವ್ಸ್ ಮತ್ತು ಕೆನಡಾದಿಂದ ಒಬ್ಬರು ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ವಿವಾದಾತ್ಮಕ ಉದ್ಯೋಗ ಕೋಟಾ ವ್ಯವಸ್ಥೆಯನ್ನು ರದ್ದುಗೊಳಿಸಿ, ಅರ್ಹತೆ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡುವಂತೆ ಶೇಖ್‌ ಹಸೀನಾ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇದರಿಂದಾಗಿ ನೆರೆಯ ಬಾಂಗ್ಲಾದೇಶದಲ್ಲಿ ಮಾರಣಾಂತಿಕ ಘರ್ಷಣೆಗಳು ಉಂಟಾಗಿವೆ ಈವರೆಗೆ ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಬಿಎಸ್‌ಎಫ್ ಪ್ರಧಾನ ಕಚೇರಿಯ ಹೆಚ್ಚುವರಿ ಮಹಾನಿರ್ದೇಶಕ ಮತ್ತು ಕೋಲ್ಕತ್ತಾದ ಪೂರ್ವ ಕಮಾಂಡ್‌ನ ವಿಶೇಷ ಡಿಜಿ ರವಿ ಗಾಂಧಿ ಅವರು ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ 'ಕಾರ್ಯಾಚರಣೆ ಎಚ್ಚರಿಕೆ' ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನ ಜೈಲಿನ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿನ ಅಕ್ರಮ ಕಂಡು ಶಾಕ್