Select Your Language

Notifications

webdunia
webdunia
webdunia
webdunia

ಮಂಗಳೂರಿನ ಜೈಲಿನ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿನ ಅಕ್ರಮ ಕಂಡು ಶಾಕ್

Mangalore Jail

Sampriya

ಮಂಗಳೂರು , ಗುರುವಾರ, 25 ಜುಲೈ 2024 (18:44 IST)
Photo Courtesy X
ಮಂಗಳೂರು: ಇಂದು ಬೆಳ್ಳಂಬೆಳಗ್ಗೆ ಇಲ್ಲಿನ ಕಾರಾಗೃಹಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು ಈ ವೇಳೆ ಬೆಚ್ಚಿ ಬೀಳಿಸುವ ವಿಷಯ ಬಯಲಾಗಿದೆ.

ದಾಳಿ ವೇಳೆ 25 ಮೊಬೈಲ್ ಫೋನ್‌, ಗಾಂಜಾ, ಬ್ಲೂಟೂತ್ ಸಾಧನ, ಐದು ಹೆಡ್‌ ಫೋನ್‌, ಯುಎಸ್‌ ಬಿ ಡ್ರೈವ್, ಚಾರ್ಜರ್‌ ಮತ್ತು ಕತ್ತರಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ  ನಾಲ್ಕು ಗಂಟೆ ಸುಮಾರಿಗೆ ಪೊಲೀಸರು ದಿಢೀರನೆ ಮಂಗಳೂರು ಕಾರಾಗೃಹದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕೈದಿಗಳ ಬಳಿಯಿದ್ದ  ಗಾಂಜಾ ಹಾಗೂ ಡ್ರಗ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.

150ಕ್ಕೂ ಹೆಚ್ಚು ಪೊಲೀಸರು ಏಕಕಾಲದಲ್ಲಿ ಜೈಲಿನ ಮೇಲೆ ದಾಳಿ ನಡೆಸಿದರು. ಡ್ರಗ್ಸ್ ಮತ್ತು ಗಾಂಜಾ ಪತ್ತೆಯಾಗಿರುವ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತನಿಖೆಗೆ ಆದೇಶಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರಂತರ ಮಳೆ: 2 ವರ್ಷಗಳ ನಂತ್ರ ಭರ್ತಿಯಾದ ಹೇಮಾವತಿ ಜಲಾಶಯ