ತಿರುಪತಿ: ಇತ್ತೀಚೆಗಷ್ಟೇ ತಿರುಪತಿ ಲಡ್ಡಿನಲ್ಲಿ ಜಗನ್ ರೆಡ್ಡಿ ಸಿಎಂ ಆಗಿದ್ದಾಗ ಪ್ರಾಣಿಗಳ ಕೊಬ್ಬು ಕಲಬೆರಕೆಯಾಗುತ್ತಿತ್ತು ಎಂಬ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಜಗನ್ ಪಕ್ಷದ ನಾಯಕಿ ಝಾಕಿಯಾ ಖಾನಂನಿಂದ ಟಿಕೆಟ್ ವಿಚಾರದಲ್ಲಿ ನಡೆದ ಗೋಲ್ಮಾಲ್ ಬೆಳಕಿಗೆ ಬಂದಿದೆ.
ತಿರುಪತಿಯಲ್ಲಿ ದೇವರ ದರ್ಶನಕ್ಕಾಗಿ ನೀಡಲಾಗುವ ವಿಐಪಿ ಟಿಕೆಟ್ ನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ದಂಧೆ ಬೆಳಕಿಗೆ ಬಂದಿದೆ. 10,500 ರೂ.ಗಳ ವಿಐಪಿ ಟಿಕೆಟ್ ನ್ನು ಝಾಕಿಯಾ ಮತ್ತು ಸಹಚರರು 65000 ರೂ.ಗೆ ಮಾರಾಟ ಮಾಡುತ್ತಿದ್ದುದು ಈಗ ಬೆಳಕಿಗೆ ಬಂದಿದೆ. ಇದರ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ.
ಈ ಸಂಬಂಧ ಝಾಕಿಯಾ ಹಾಗೂ ಆಕೆಯ ಇಬ್ಬರು ಆಪ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿಯಲ್ಲಿ ನಡೆದ ಮತ್ತೊಂದು ಹಗರಣ ಇದೀಗ ಬಯಲಿಗೆ ಬಂದಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಜಗನ್ ಪಕ್ಷ ಈಗ ಝಾಕಿಯಾ ನಮ್ಮ ಪಕ್ಷದವರೇ ಅಲ್ಲ, ಟಿಡಿಪಿ ಪಕ್ಷದವರು ಎಂದಿದೆ.
ತಿರುಪತಿಗೆ ದೇವಾಲಯಕ್ಕೆ ಭೇಟಿ ನೀಡುವ ವಿಐಪಿಗಳಿಗೆ ಟಿಕೆಟ್ ವೆಚ್ಚ ಕಡಿತಗೊಳಿಸಲಾಗುತ್ತದೆ. ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ವಿಶೇಷ ಕೋಟಾದಡಿ ಟಿಕೆಟ್ ನೀಡಲಾಗುತ್ತದೆ. ಈ ಟಿಕೆಟ್ ಗಳನ್ನು ಝಾಕಿಯಾ ತಮ್ಮ ಲಾಭಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.