ಬೆಂಗಳೂರು: ಚನ್ನಪಟ್ಟಣ ಬೈ ಎಲೆಕ್ಷನ್ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಬಿಜೆಪಿ ಟಿಕೆಟ್ ಸಿಗದೇ ಸಿಡಿದೆದ್ದಿರುವ ಸಿಪಿ ಯೋಗೇಶ್ವರ್ ಚಿತ್ತ ಯಾವ ಕಡೆಗೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಸಿಪಿ ಯೋಗೇಶ್ವರ್ ಗೆ ಬಿಜೆಪಿಯಿಂದ ಟಿಕೆಟ್ ಕೊಡಲು ಪಕ್ಷದ ಸಹಮತವಿದೆ. ಆದರೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಬಿಟ್ಟುಕೊಡಲು ತಯಾರಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಹೈಕಮಾಂಡ್ ಬೆಂಬಲ ಕುಮಾರಸ್ವಾಮಿಯವರಿಗಿದೆ. ಇದು ಅವರಿಗೆ ಆನೆಬಲ ಬಂದಂತಾಗಿದೆ.
ಹೀಗಾಗಿ ಬಿಜೆಪಿ ಟಿಕೆಟ್ ಸಿಗುವುದು ಕಷ್ಟ. ಇನ್ನೊಂದೆಡೆ ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಅವರ ಪುತ್ರಿ ನಿಶಾರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಚನ್ನಪಟ್ಟಣ ಟಿಕೆಟ್ ಡಿಕೆ ಶಿವಕುಮಾರ್ ಅಷ್ಟು ಸುಲಭವಾಗಿ ಹೊರಗಿನಿಂದ ಬಂದವರಿಗೆ ಬಿಟ್ಟುಕೊಡುವ ಸಾಧ್ಯತೆಯಿಲ್ಲ.
ಹೀಗಾಗಿ ಅತ್ತ ಬಿಜೆಪಿ ಟಿಕೆಟ್ ಇಲ್ಲ, ಇತ್ತ ಕಾಂಗ್ರೆಸ್ ಟಿಕೆಟ್ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಯೋಗೇಶ್ವರ್ ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕಾಗುತ್ತದೆ. ಅತ್ತ ಕಾಂಗ್ರೆಸ್ ವಿರೋಧ ಕಟ್ಟಿಕೊಂಡು ಇತ್ತ ಜೆಡಿಎಸ್ ಗೆ ಶತ್ರುವಾಗಿ ಯೋಗೇಶ್ವರ್ ಗೆ ಇಲ್ಲಿ ಗೆಲುವು ಸುಲಭವಲ್ಲ.