Select Your Language

Notifications

webdunia
webdunia
webdunia
webdunia

ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ ವಿವಾದ: ಶುದ್ಧೀಕರಣಕ್ಕೆ ತಿರುಪತಿಯಲ್ಲಿ ಶಾಂತಿ ಹೋಮ

ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ ವಿವಾದ:  ಶುದ್ಧೀಕರಣಕ್ಕೆ ತಿರುಪತಿಯಲ್ಲಿ ಶಾಂತಿ ಹೋಮ

Sampriya

ಹೈದರಾಬಾದ್ , ಸೋಮವಾರ, 23 ಸೆಪ್ಟಂಬರ್ 2024 (14:18 IST)
ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದ್ದ ಲಡ್ಡಿಗೆ ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾದ ಹಿನ್ನೆಲೆಯಲ್ಲಿ, ದೇವಸ್ಥಾನದ ಶುದ್ಧೀಕರಣದ ಬಗ್ಗೆ ಚಿಂತನೆ ನಡೆಸಲಾಗಿದೆ.

ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿಯು ಸಂಪ್ರೋಕ್ಷಣ ಕಾರ್ಯದ ಭಾಗವಾಗಿ ಶಾಂತಿ ಹೋಮವನ್ನು ಕೈಗೊಂಡಿದೆ.

ತಿರುಪತಿಯಲ್ಲಿ ಇಂದು ಶಾಂತಿ ಹೋಮವನ್ನು ಕೈಗೊಂಡಿದ್ದು, ಈ ಹೋಮದಲ್ಲಿ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಶಾಮಲಾರಾವ್ ಮತ್ತು ಮಂಡಳಿಯ ಇತರೆ ಅಧಿಕಾರಿಗಳು ಸೇರಿದಂತೆ ಅನೇಕ ಅರ್ಚಕರು ಪಾಲ್ಗೊಂಡಿದ್ದರು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಟಿಟಿಡಿ ವಿಚಾರವಾಗಿ ಏನು ಮಾಡಬೇಕು ಹಾಗೂ ಅದನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ. ಸಂಪ್ರೋಕ್ಷಣ (ವಿಧಿಬದ್ಧವಾದ ಶುದ್ಧೀಕರಣ ಕಾರ್ಯ) ಹೇಗೆ ನಡೆಯಬೇಕು ಎಂಬುದನ್ನು ಕಂಚಿ ಪೀಠಾಧಿಪತಿಗಳು, ಸನಾತದ ಧರ್ಮದ ವಿದ್ವಾಂಸರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ. ನಾವು ಈ ನಿಟ್ಟಿನಲ್ಲಿ ಈಗಾಗಲೇ ಆಲೋಚನೆ ನಡೆಸಿದ್ದೇವೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸುದ್ದಿಗಾರರಿಗೆ ತಿಳಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವೈಯಾಲಿಕಾವಲ್ ಮಹಾಲಕ್ಷ್ಮಿ ಮರ್ಡರ್ ಕೇಸ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಕಮಿಷನರ್