Select Your Language

Notifications

webdunia
webdunia
webdunia
webdunia

ಬೆಟ್ಟದಿಂದ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ!

ಬೆಟ್ಟದಿಂದ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ!
ಮುಂಬೈ , ಭಾನುವಾರ, 12 ಮಾರ್ಚ್ 2023 (09:24 IST)
ಮುಂಬೈ : ಮನೆಯಲ್ಲಿ ಮದುವೆಗೆ ವಿರೋಧಿಸಿದ್ದರಿಂದ ಯುವ ಪ್ರೇಮಿಗಳಿಬ್ಬರು ಬೆಟ್ಟದ ತುದಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಸಮತಾ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇಬ್ಬರೂ ನೆರೆಹೊರೆಯವರಾಗಿದ್ದು, ಮನೆಯವರು ಮದುವೆಗೆ ನಿರಾಕರಿಸಿದ್ದರಿಂದ ಯುವಕ ಆಕಾಶ್ ಜಾಟೆ (21) ಹಾಗೂ 16 ವರ್ಷದ ಬಾಲಕಿ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆಯ ಹಿಂದಿನ ರಾತ್ರಿ ಅಪ್ರಾಪ್ತೆ ಮನೆಯಿಂದ ನಾಪತ್ತೆಯಾಗಿದ್ದಳು. ಎಷ್ಟು ಹುಡುಕಾಡಿದರೂ ಸಿಗದೇ, ಕೊನೆಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಕಿಡ್ನ್ಯಾಪ್ ಕೇಸ್ ದಾಖಲಿಸಿಕೊಂಡಿದ್ದರು. 

ಶುಕ್ರವಾರ ಮಧ್ಯಾಹ್ನ 12:30ರ ಸುಮಾರಿಗೆ ಸಮತಾನಗರದಲ್ಲಿ ಅಪರಿಚಿತ ಶವಗಳು ಪತ್ತೆಯಾಗಿದ್ದು, ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ನಡೆದ ತನಿಖೆಯಲ್ಲಿ ಗುರುತು ಪತ್ತೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ