Select Your Language

Notifications

webdunia
webdunia
webdunia
webdunia

ಲವ್ವರ್ ನೋಡಲು ಬಂದ ಗಗನಸಖಿ ಸೂಸೈಡ್: ಆತ್ಮಹತ್ಯೆಯೋ, ಕೊಲೆಯೋ..?

ಲವ್ವರ್ ನೋಡಲು ಬಂದ ಗಗನಸಖಿ ಸೂಸೈಡ್: ಆತ್ಮಹತ್ಯೆಯೋ, ಕೊಲೆಯೋ..?
bangalore , ಶನಿವಾರ, 11 ಮಾರ್ಚ್ 2023 (18:40 IST)
ದೂರದ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಅಂತರಾಷ್ಟ್ರೀಯ ಏರ್ ಲೈನ್ ನಲ್ಲಿ ಗಗನಸಖಿಯಾಗಿದ್ದ ಯುವತಿ ಬಹುಡಿ ಕಟ್ಟಡದಿಂದ ಬಿದ್ದು ಸೂಸೈಡ್ ಮಾಡಿಕೊಂಡಿದ್ದಾಳೆ. ಅರ್ಚನಾ ಧೀಮಾನ್ ಮೃತ ದುರ್ದೈವಿ.ಪ್ರಿಯಕರ ಆದೇಶ್ ವಾಸವಿದ್ದ ಕೋರಮಂಗಲದ ಎಂಟನೇ ಬ್ಲಾಕ್ ನಲ್ಲಿದ್ದ ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಾಲ್ಕನೇ ಮಹಡಿಯಿಂದ ಬಿದ್ದು  ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
 
ಅರ್ಚನಾ ಧೀಮಾನ್ ಮೂಲತಃ ಹಿಮಾಚಲ ಪ್ರದೇಶದಳವಾಗಿದ್ದು, ಕೇರಳ ಮೂಲದ ಆದೇಶ್ ಎಂಬ ಟೆಕ್ಕಿಯನ್ನ ಪ್ರೀತಿಸುತ್ತಿದ್ದಳು. ಆದೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದ. ಡೇಟಿಂಗ್ ಆ್ಯಪ್ ಮೂಲಕ ಗಗನಸಖಿ ಅರ್ಚನಾ ಹಾಗೂ ಆದೇಶ್ ಪರಿಚಯವಾಗಿ ಇಬ್ಬರಿಗೂ ಲವ್ ಆಗಿದೆ. ಪ್ರಿಯಕರ ಆದೇಶ್  ನೋಡಲು ಅರ್ಚನಾ ಬೆಂಗಳೂರಿನ ಕೋರಮಂಗಲಕ್ಕೆ  ಬಂದಿದ್ದಳು‌. ನಿನ್ನೆ ರಾತ್ರಿ ಇಬ್ಬರು ಪೋರಂ ಮಾಲ್ ಗೆ ಹೋಗಿ ಸಿನಿಮಾ ನೋಡಿಕೊಂಡು ಬಂದಿದ್ದಾರೆ. ತಡರಾತ್ರಿಯವರೆಗೂ ಇಬ್ಬರು ಪಾರ್ಟಿ ಮಾಡಿದ್ದಾರೆ. ಪಾರ್ಟಿ ಬಳಿಕ  ಇಬ್ಬರ ನಡುವೆ ಲವ್ ವಿಚಾರವಾಗಿ ಗಲಾಟೆಯಾಗಿ ಅರ್ಚನಾ, ಆದೇಶ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಗಲಾಟೆ ಬಳಿಕ ಯುವತಿ ನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
 
ಯುವತಿ ಅರ್ಚನಾ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಅರ್ಚನಾಳನ್ನು ಆದೇಶ್ ತಳ್ಳಿರುವ ಸಾಧ್ಯತೆ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರೀಯಕರ ಆದೇಶ್ ನನ್ನ ಕೋರಮಂಗಲ ಪೊಲೀಸರು ವಶಕ್ಕೆ ಪಡೆದು ತನಿಖೆ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಅರ್ಚನಾ ಪೋಷಕರಿಗೆ ಮಾಹಿತಿ ನೀಡಿದ್ದು, ಪೋಷಕರು ಬಂದು ದೂರು ಯಾವ ರೀತಿ ದಾಖಲು‌ ಮಾಡುತ್ತಾರೆ ಎಂಬ ಆಧಾರದ ಮೇಲೆ ಎಫ್ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಡಿಯಿಂದ‌ ಬಿದ್ದು ಯುವತಿ ಆತ್ಮಹತ್ಯೆ