Select Your Language

Notifications

webdunia
webdunia
webdunia
webdunia

ಮಕ್ಕಳಿದ್ದರೂ, ಆಸ್ತಿಯನ್ನು UP ಸರ್ಕಾರದ ಹೆಸರಿಗೆ ಬರೆದ ವೃದ್ಧ

ಮಕ್ಕಳಿದ್ದರೂ, ಆಸ್ತಿಯನ್ನು UP ಸರ್ಕಾರದ ಹೆಸರಿಗೆ ಬರೆದ ವೃದ್ಧ
ಲಕ್ನೋ , ಮಂಗಳವಾರ, 7 ಮಾರ್ಚ್ 2023 (11:19 IST)
ಲಕ್ನೋ : ವೃದ್ಧನೊಬ್ಬ ತಮ್ಮ ಮಕ್ಕಳು ಕೈಬಿಟ್ಟಿದ್ದಕ್ಕೆ ಮನನೊಂದು 1.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ವಿಲ್ ಮಾಡಿರುವ ವಿಚಿತ್ರ ಘಟನೆ ನಡೆದಿದೆ.
 
ಮುಜಾಫರ್ನಗರದ ನಿವಾಸಿಯಾದ 85 ವರ್ಷದ ನಾಥು ಸಿಂಗ್ ಉತ್ತರ ಪ್ರದೇಶ ಸರ್ಕಾರಕ್ಕೆ ವಿಲ್ ಬರೆದಿರುವ ವ್ಯಕ್ತಿ. ನಾಥು ಸಿಂಗ್ ಒಟ್ಟು 1.5 ಕೋಟಿ ಮೌಲ್ಯದ ಮನೆ ಹಾಗೂ ಜಮೀನನಲ್ಲಿ ತಮ್ಮ ಪತ್ನಿ ಸಂತೋಷದಿಂದ ಜೀವನ ನಡೆಸುತ್ತಿದ್ದರು.

ಜೊತೆಗೆ ಇವರಿಗೆ ಓರ್ವ ಪುತ್ರ ಸೇರಿ ಐವರು ಮಕ್ಕಳಿದ್ದಾರೆ. ನಾಥುಸಿಂಗ್ ಪುತ್ರ ಶಾಲಾ ಶಿಕ್ಷಕನಾಗಿ ಸಹರಾನ್ಪುರದಲ್ಲಿ ವಾಸವಾಗಿದ್ದ. ಉಳಿದ ನಾಲ್ವರು ಪುತ್ರಿಯರನ್ನು ಮದುವೆ ಮಾಡಿಕೊಡಲಾಗಿತ್ತು.

ಇದಾದ ಬಳಿಕ ನಾಥುಸಿಂಗ್ ಅವರ ಪತ್ನಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಳು. ಅದಾದ ಕೆಲವೇ ದಿನಗಳಲ್ಲಿ ನಾಥುಸಿಂಗ್ ಐವರು ಮಕ್ಕಳಿದ್ದರೂ ಒಂಟಿ ಜೀವನ ನಡೆಸಲು ಪ್ರಾರಂಭಿಸಿದರು. ಈ ಒಂಟಿತನದಿಂದಾಗಿ ಬೇಸತ್ತು ಸುಮಾರು 7 ತಿಂಗಳ ಹಿಂದೆ ತಮ್ಮ ಗ್ರಾಮದಲ್ಲೇ ಇರುವ ವೃದ್ಧಾಶ್ರಮಕ್ಕೆ ಸೇರಿದರು.

ಈ ವೇಳೆಯೂ ನಾಥುಸಿಂಗ್ನನ್ನು ಭೇಟಿ ಮಾಡಲು ಅವರ ಮಕ್ಕಳು ಯಾರು ಬಂದಿರಲಿಲ್ಲ. ಇದರಿಂದಾಗಿ ಬೇಸರಗೊಂಡ ನಾಥುಸಿಂಗ್ ತಮ್ಮ ಎಲ್ಲಾ ಆಸ್ತಿಯನ್ನು ರಾಜ್ಯ ಸರ್ಕಾರದ ಹೆಸರಿಗೆ ವಿಲ್ ಮಾಡಲು ನಿರ್ಧರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಫೋನ್ ಫ್ಯಾಕ್ಟರಿ: ಫಾಕ್ಸ್‌ಕಾನ್‌ ಅಧಿಕೃತ ಘೋಷಣೆ