ಕೋಲ್ಕತ್ತಾ : ಕೊರೊನಾ ಲಾಕ್ಡೌನ್ ನಂತರ ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ವರ್ಕ್ ಫ್ರಮ್ ಹೋಮ್ ಸಾಮಾನ್ಯವಾಗಿದೆ.
ಆದರೆ ಇಲ್ಲೊಬ್ಬ ವರ ತನ್ನ ಮದುವೆಯ ದಿನವೂ ಮಂಟಪದಲ್ಲಿ ಲ್ಯಾಪ್ಟಾಪ್ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾನೆ.
ಕೋಲ್ಕತ್ತಾದ ವರನೊಬ್ಬ ಪುರೋಹಿತರೊಂದಿಗೆ ಕುಳಿತು ತನ್ನ ಮದುವೆ ಕಾರ್ಯದ ಜೊತೆಗೆ ಲ್ಯಾಪ್ಟಾಪ್ನಲ್ಲಿ ಕೆಲಸವನ್ನು ಮಾಡುತ್ತಿದ್ದಾನೆ. ಇತ್ತ ಪುರೋಹಿತರು ವಿಧಿವಿಧಾನಗಳನ್ನು ನೆರವೇರಿಸಿ ವರನನ್ನು ಆಶೀರ್ವದಿಸುತ್ತಿದ್ದಾರೆ.
ಆದರೆ ವರ ಪುರೋಹಿತರ ಕಡೆಗೆ ನೋಡದೇ ಆತ ತನ್ನ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತ ಮಗ್ನನಾಗಿದ್ದಾನೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.