Select Your Language

Notifications

webdunia
webdunia
webdunia
webdunia

ಉತ್ತರ ಭಾರತದಾದ್ಯಂತ NIA ದಾಳಿ!

ಉತ್ತರ ಭಾರತದಾದ್ಯಂತ NIA ದಾಳಿ!
ನವದೆಹಲಿ , ಮಂಗಳವಾರ, 29 ನವೆಂಬರ್ 2022 (12:31 IST)
ನವದೆಹಲಿ : ಗ್ಯಾಂಗ್ಸ್ಟರ್ ಹಾಗೂ ಭಯೋತ್ಪಾದನೆಗೆ ಸಂಬಂಧಪಟ್ಟಂತಹ ಪ್ರಕರಣದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸುಮಾರು 20 ಕಡೆಗಳಲ್ಲಿ ದಾಳಿ ನಡೆಸಿದೆ.

ಲಾರೆನ್ಸ್ ಬಿಷ್ಣೋಯ್, ನೀರಜ್ ಬವಾನಾ ಹಾಗೂ ಟಿಲ್ಲಿ ತಾಜ್ಪುರಿಯಾ ಸೇರಿದಂತೆ 6 ಗ್ಯಾಂಗ್ಸ್ಟರ್ಗಳ ವಿಚಾರಣೆಯ ಬಳಿಕ ಎನ್ಐಎ ದೆಹಲಿ-ಎನ್ಸಿಆರ್, ರಾಜಸ್ಥಾನ, ಹರಿಯಾಣ ಹಾಗೂ ಪಂಜಾಬ್ನಾದ್ಯಂತ 20 ಸ್ಥಳಗಳಲ್ಲಿ ದಾಳಿ ನಡೆಸಲು ಪ್ರಾರಂಭಿಸಿದೆ.

ಮೂಲಗಳ ಪ್ರಕಾರ, 6 ಮಂದಿ ಗ್ಯಾಂಗ್ಸ್ಟರ್ಗಳ ವಿಚಾರಣೆ ವೇಳೆ ಇನ್ನೂ ಹಲವು ಗ್ಯಾಂಗ್ಸ್ಟರ್ಗಳ ಹೆಸರುಗಳು ಬಯಲಿಗೆ ಬಂದಿವೆ. ಎನ್ಐಎ ಬಂಧಿತ ಗ್ಯಾಂಗ್ಸ್ಟರ್ಗಳ ಮನೆಗಳು, ಅವರಿಗೆ ಸಹಾಯ ಮಾಡುತ್ತಿದ್ದವರು ಹಾಗೂ ಅವರಿಗೆ ಸಂಬಂಧಪಟ್ಟ ಇತರ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. 

ಈ ಗ್ಯಾಂಗ್ಸ್ಟರ್ಗಳು ಇತರ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಲಾರೆನ್ಸ್ ಬಿಷ್ಣೋಯ್ ಹಾಗೂ ಬವಾನಾ ಗ್ಯಾಂಗ್ ಹೆಸರಿನಲ್ಲಿ ಭಾರತದಲ್ಲಿ ಭಯೋತ್ಪಾದನೆಗಾಗಿ ಸಾಕಷ್ಟು ಹಣ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟ್ಟರ್ ಅನ್ನು ತೆಗೆಯೋದಾಗಿ ಆಪಲ್ ಬೆದರಿಕೆ ಹಾಕಿದೆ : ಮಸ್ಕ್