Publish Date: Sat, 26 Nov 2022 (15:54 IST)
Updated Date: Sat, 26 Nov 2022 (15:59 IST)
ಕಳೆದ ಶನಿವಾರ ನವೆಂಬರ್ 19ರ ಸಂಜೆ ಮಂಗಳೂರಿನ ನಾಗುರಿಯಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟವು ಇಡೀ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಈ ಸ್ಫೋಟದ ಮುಖ್ಯ ರೂವಾರಿಯಾಗಿರುವ ಉಗ್ರ ಶಾರೀಕ್ ಸ್ಫೋಟದಿಂದ ಶೇಕಡ 45 ರಷ್ಟು ಗಾಯಗೊಂಡಿದ್ದು, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರ ತನಿಖೆ ವೇಳೆ ಉಗ್ರನ ಕ್ರೂರ ಮುಖವಾಡ ಹೊರಬಂದಿದ್ದು, ಹಲವು ಸ್ಫೋಟಕ ವಿಷಯಗಳು ಪೊಲೀಸರನ್ನ ಬೆಚ್ಚಿಬೀಳಿಸಿದೆ. ಕೇಂದ್ರ ಗೃಹ ಇಲಾಖೆ ಆದೇಶದ ಬಳಿಕ ಸ್ಫೋಟದ ತನಿಖೆಯನ್ನು NIAಗೆ ವಹಿಸಲಾಗಿದೆ. FIR ದಾಖಲಿಸಿಕೊಂಡು NIA ಪ್ರಕರಣದ ತನಿಖೆಗೆ ಇಳಿದಿದೆ. ಸದ್ಯ ಆರೋಪಿ ಶಾರೀಕ್ ಬಂಧನಕ್ಕೆ NIA ಸಿದ್ಧತೆ ಮಾಡಿಕೊಂಡಿದೆ. ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯ ಹಾಗೂ ತನಿಖೆಯ ಮಾಹಿತಿಯ ಜೊತೆಗೆ FIR ಪ್ರತಿಯನ್ನು NIA ಅಧಿಕಾರಿಗಳು ಕೋರ್ಟ್‌ಗೆ ನೀಡಿದ್ದಾರೆ.