Publish Date: Sat, 26 Nov 2022 (15:43 IST)
Updated Date: Sat, 26 Nov 2022 (15:45 IST)
ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಬೈಕ್ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 6.50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಶೋಕಿ ಜೀವನ ನಡೆಸುವ ಉದ್ದೇಶದಿಂದ ರಂಜಿತ್ ಅಲಿಯಾಸ್ ಸಂತು ಹಾಗೂ ಅಜಿತ್ ಎಂಬ ಇಬ್ಬರು ಆರೋಪಿಗಳು ವಿದ್ಯಾರಣ್ಯಪುರ, ಕೊಡಿಗೇಹಳ್ಳಿ, ಯಶವಂತಪುರ, ನಂದಿನಿ ಲೇಔಟ್ ಹಾಗೂ ಸಂಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಬಾರಿ ಬೈಕ್ಗಳು ಹಾಗೂ ಮನೆಗಳಲ್ಲಿರುವ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದರು. ಸದ್ಯ ಆರೋಪಿಗಳನ್ನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದು, ಚಿನ್ನಾಭರಣ, ಬೈಕ್ಗಳು, ಲ್ಯಾಪ್ ಟಾಪ್ ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ 7 ಕಳವು ಪ್ರಕರಣ ಪತ್ತೆಯಾಗಿವೆ.