Select Your Language

Notifications

webdunia
webdunia
webdunia
webdunia

ವರ್ಕ್ ಫ್ರಮ್ ಹೋಮ್ : ಸೆಕ್ಸ್ ವೀಡಿಯೋ ವೀಕ್ಷಣೆ ಸಂಖ್ಯೆ ಹೆಚ್ಚಳ!

ವರ್ಕ್ ಫ್ರಮ್ ಹೋಮ್ : ಸೆಕ್ಸ್ ವೀಡಿಯೋ ವೀಕ್ಷಣೆ ಸಂಖ್ಯೆ ಹೆಚ್ಚಳ!
ಲಂಡನ್ , ಶುಕ್ರವಾರ, 26 ಆಗಸ್ಟ್ 2022 (10:01 IST)
ಲಂಡನ್ : ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿದ್ದು, ಇದರಿಂದ ಯುಕೆ ನಲ್ಲಿ ಅಶ್ಲೀಲ ವೀಡಿಯೋ ಹಾಗೂ ಫೋಟೋಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ.
 
ಅಲ್ಲದೆ ಹೆಚ್ಚಿನ ಜನ ವ್ಯಸನಿಗಳಾಗುತ್ತಿದ್ದಾರೆ ಎಂಬವುದು ಸರ್ವೇಯೊಂದರಲ್ಲಿ ಬಯಲಾಗಿದೆ. ವರ್ಕ್ ಫ್ರಂ ಹೋಮ್ ಜನಪ್ರಿಯವಾದಾಗಿನಿಂದ ಪೋರ್ನೋಗ್ರಫಿ ನೋಡುವ ಯುಕೆ ನಾಗರಿಕರ ಸಂಖ್ಯೆ ವಾಸ್ತವವಾಗಿ ದ್ವಿಗುಣಗೊಂಡಿದೆ ಎಂದು ವರದಿಯಾಗಿದೆ.

ತಜ್ಞರ ಪ್ರಕಾರ, ವರ್ಕ್ ಫ್ರಮ್ ಹೋಮ್ ಸಾಂದರ್ಭಿಕ ಅಶ್ಲೀಲ ವೀಕ್ಷಕರನ್ನೂ ವ್ಯಸನಿಗಳನ್ನಾಗಿ ಮಾಡಲು ಕಾರಣವಾಗಿದೆ. ಈ ಮೂಲಕ ಸಮಸ್ಯೆಗೆ ಸಿಲುಕಿ ವೈದ್ಯಕೀಯ ಆರೈಕೆ ಪಡೆಯುತ್ತಿರುವವರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಆದ್ದರಿಂದ ಅಶ್ಲೀಲ ವ್ಯಸನಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತಿದೆ.

ಅಶ್ಲೀಲ ವ್ಯಸನವು ಲೈಂಗಿಕ ವ್ಯಸನದ ಒಂದು ಭಾಗವಾಗಿದೆ. ಇದರಿಂದ ಮುಕ್ತರಾಗಲು ಲಂಡನ್ನಿನ ಲಾರೆಲ್ ಸೆಂಟರ್ ಲೈಂಗಿಕ ಚಿಕಿತ್ಸಾಲಯದಲ್ಲಿ, ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಾ ಅಶ್ಲೀಲತೆ ವೀಕ್ಷಿಸುವವರಿಗೆ ರಿಮೋಟ್ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ತೀರಿಸಲು ತಂದೆ-ತಾಯಿಗೆ ಟೀಯಲ್ಲಿ ಇಲಿ ಪಾಷಾಣ ಹಾಕಿದ ಮಗಳು!