Select Your Language

Notifications

webdunia
webdunia
webdunia
webdunia

ಸಾಲ ತೀರಿಸಲು ತಂದೆ-ತಾಯಿಗೆ ಟೀಯಲ್ಲಿ ಇಲಿ ಪಾಷಾಣ ಹಾಕಿದ ಮಗಳು!

ಸಾಲ ತೀರಿಸಲು ತಂದೆ-ತಾಯಿಗೆ ಟೀಯಲ್ಲಿ ಇಲಿ ಪಾಷಾಣ ಹಾಕಿದ ಮಗಳು!
ತಿರುವನಂತಪುರಂ , ಶುಕ್ರವಾರ, 26 ಆಗಸ್ಟ್ 2022 (09:51 IST)
ತಿರುವನಂತಪುರಂ : ಪತಿಗೆ ತಿಳಿಸದೇ ಮಾಡಿದ್ದ ಸಾಲ ತೀರಿಸಲು ಮಹಿಳೆಯೊಬ್ಬರು ತನ್ನ ತಂದೆ-ತಾಯಿಗೆ ವಿಷ ಹಾಕಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.
 
ತ್ರಿಶೂರ್ ಜಿಲ್ಲೆಯ ಕುನ್ನಂಕುಲಂನಲ್ಲಿ ಈ ಘಟನೆ ನಡೆದಿದ್ದು, ಇಂದುಲೇಖಾ (39) ತನ್ನ ತಂದೆ-ತಾಯಿಗೆ ವಿಷ ಹಾಕಿದ ಮಹಿಳೆ.

ಈಕೆ ತನ್ನ ತಂದೆ ಚಂದ್ರನ್ ಹಾಗೂ ತಾಯಿ ರುಕ್ಮಿಣಿ ಅವರಿಗೆ ಕುಡಿಯಲು ಕೊಟ್ಟಿದ್ದ ಟೀನಲ್ಲಿ ಇಲಿ ಪಾಷಾಣ ಹಾಕಿದ್ದಳು. ಟೀ ಕುಡಿದು ತಾಯಿ ಮೃತಪಟ್ಟರೆ, ರುಚಿಯಲ್ಲಿ ವ್ಯತ್ಯಾಸ ಕಂಡ ತಂದೆ ಅದನ್ನು ಕುಡಿಯದೇ ಪ್ರಾಣ ಉಳಿಸಿಕೊಂಡಿದ್ದಾರೆ. 

ದುಬೈನಲ್ಲಿ ಕೆಲಸ ಮಾಡುತ್ತಿರುವ ಪತಿಗೆ ತಿಳಿಸದೆಯೇ ಇಂದುಲೇಖಾ ಆಭರಣಗಳನ್ನು ಒತ್ತೆ ಇಟ್ಟು 8 ಲಕ್ಷ ರೂ. ಸಾಲ ಪಡೆದಿದ್ದರು. ಪತಿ ರಜೆ ಮೇಲೆ ಊರಿಗೆ ಬರುತ್ತಿದ್ದುದನ್ನು ತಿಳಿದು, ಸಾಲ ತೀರಿಸಲು ದಿಕ್ಕು ತೋಚಿಲ್ಲ.

ಪತಿ ಬರುವಷ್ಟರಲ್ಲಿ ಹೇಗಾದರೂ ಸಾಲ ತೀರಿಸಬೇಕೆಂದು ನಿರ್ಧರಿಸಿದ ಇಂದುಲೇಖಾ ಕಣ್ಣಿಗೆ ಬಿದ್ದಿದ್ದು ಆಕೆಯ ತಂದೆ-ತಾಯಿ. ಪೋಷಕರ ಆಸ್ತಿಯನ್ನು ಮಾರಿ ಸಾಲ ತೀರಿಸಲು ಮುಂದಾಗಿದ್ದಳು.

ತನ್ನ ಪೋಷಕರನ್ನು ಕೊಲ್ಲಲು ಇಂದುಲೇಖಾ ನಿರ್ಧರಿಸಿದ್ದಾಳೆ. ನಂತರ ಅವರಿಗೆ ಕುಡಿಯಲು ಕೊಟ್ಟಿದ್ದ ಟೀಯಲ್ಲಿ ಇಲಿ ಪಾಷಾಣ ಬೆರೆಸಿದ್ದಾಳೆ. ಟೀಯನ್ನು ತಾಯಿ ಕುಡಿದಿದ್ದಾರೆ. ಆದರೆ ಟೀ ರುಚಿಯಲ್ಲಿ ಕಹಿ ಅನುಭವವಾಗಿ ಆಕೆ ತಂದೆ ಒಂದು ಗುಟುಕನ್ನಷ್ಟೇ ಕುಡಿದು ಸುಮ್ಮನಾಗಿದ್ದಾರೆ.

ಟೀ ಕುಡಿದ ಇಂದುಲೇಖಾ ತಾಯಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಟಿಬೆಟ್ ಧರ್ಮಗುರು ದಲೈಲಾಮಾ ದೆಹಲಿಗೆ ಭೇಟಿ