Select Your Language

Notifications

webdunia
webdunia
webdunia
webdunia

ಅಪ್ಪ-ಅಮ್ಮನ ಮಚ್ಚಿನಿಂದ ಕೊಚ್ಚಿ ಕೊಂದ ಮಗ !

ಅಪ್ಪ-ಅಮ್ಮನ ಮಚ್ಚಿನಿಂದ ಕೊಚ್ಚಿ ಕೊಂದ ಮಗ !
ತಿರುವನಂತಪುರಂ , ಸೋಮವಾರ, 11 ಏಪ್ರಿಲ್ 2022 (08:33 IST)
ತಿರುವನಂತಪುರಂ : ಪಾಪಿ ಮಗನೊಬ್ಬ ತನ್ನ ತಂದೆ-ತಾಯಿಯನ್ನು ಮಚ್ಚಿನಿಂದ ಕೊಚ್ಚಿ ನಿರ್ದಯವಾಗಿ ಕೊಚ್ಚಿ ಕೊಲೆಗೈದ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.

ಈ ಗಟನೆ ಇಂದು ಬೆಳಗ್ಗೆ ನಡೆದಿದ್ದು, ಮಗನಿಂದ್ಲೇ ಮೃತಪಟ್ಟ ದುರ್ದೈವಿಗಳನ್ನು ಕುಟ್ಟನ್ ಹಾಗೂ ಚಂದ್ರಿಕಾ ಎಂದು ಗುರುತಿಸಲಾಗಿದೆ. ಅನೀಶ್ ಕೊಲೆ ಆರೋಪಿಯಾಗಿದ್ದು, ಗಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಕೌಟುಂಬಿಕ ಕಲಹದಿಂದಲೇ ಹತ್ಯೆ ನಡೆದಿದೆ ಎಂಬುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಮನೆ ಮುಂದೆ ರಸ್ತೆ ಬದಿಯಲ್ಲಿ ಇಬ್ಬರ ಮೃತದೇಹ ದೊರೆತಿದೆ.

ಮನೆಯಲ್ಲಿ ಆಗಾಗ ಮಗ ಹಾಗೂ ಹತ್ತವರ ನಡುವೆ ಜಗಳ ನಡೆಯುತ್ತಿತ್ತು. ಈ ಜಗಳ ಇಂದು ಬೆಳಗ್ಗೆ ತಾರಕ್ಕೇರಿದ್ದು, ತಂದೆ-ತಾಯಿ ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

ಅನಿಶ್ ಹೆತ್ತವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೂ ಮುನ್ನ ಇಬ್ಬರನ್ನು ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿದ್ದಾನೆ ಎಮದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್​​ ವಿರುದ್ಧ ಮಾಯಾವತಿ ಕಿಡಿ