Select Your Language

Notifications

webdunia
webdunia
webdunia
webdunia

ಮದುವೆ ಮನೆಯಲ್ಲಿ ಕುಟುಂಬದವರ ಮುಂದೆ ಶೈನ್ ಆಗಲು ಕಾರು ಕದ್ದು ಸಿಕ್ಕಿಬಿದ್ದ ಕಳ್ಳಿ!

ಮದುವೆ ಮನೆಯಲ್ಲಿ ಕುಟುಂಬದವರ ಮುಂದೆ ಶೈನ್ ಆಗಲು ಕಾರು ಕದ್ದು ಸಿಕ್ಕಿಬಿದ್ದ ಕಳ್ಳಿ!
ನವದೆಹಲಿ , ಸೋಮವಾರ, 8 ಅಕ್ಟೋಬರ್ 2018 (09:52 IST)
ನವದೆಹಲಿ: ಮದುವೆ ಮನೆಯಲ್ಲಿ ತನ್ನ ಕುಟುಂಬದವರ ಎದುರು ಮಿಂಚಬೇಕೆಂದು ಪ್ರಿಯಕರನ ಜತೆ ಸೇರಿ ಕಾರು ದರೋಡೆ ಮಾಡಿ ಮಹಿಳೆಯೊಬ್ಬಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಜಾರ್ಖಂಡ್ ಮೂಲದ 26 ವರ್ಷದ ಸ್ವಪ್ನ ಎಂಬಾಕೆ ತನ್ನ ಪ್ರಿಯಕರ ವರ್ಮ ಜತೆ ಸೇರಿ ಮೊದಲು ಕಾರು ಬಾಡಿಗೆಗೆ ಪಡೆದು, ನಂತರ ಕಾರಿನ ಚಾಲಕನನ್ನು ಗನ್ ತೋರಿಸಿ ಬೆದರಿಸಿ ಕಾರು ದರೋಡೆ ಮಾಡಿದ್ದಾರೆ.

ಪೊಲೀಸರು ಇವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಜಾರ್ಖಂಡ್ ನ ಹಳ್ಳಿಯೊಂದರಲ್ಲಿ ತನ್ನ ಸಹೋದರನ ಮದುವೆಯಿದ್ದು, ಆ ಮದುವೆಗೆ ಹೋಗುವಾಗ ಕುಟುಂಬದವರ ಎದುರು ಮಿಂಚಲು ಈ ರೀತಿ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಫೋನ್ ನಲ್ಲಿ ಕಿತ್ತಾಡಿದ ಮರುಕ್ಷಣವೇ ಗುಂಡೇಟಿಗೆ ಬಲಿಯಾದ!