Select Your Language

Notifications

webdunia
webdunia
webdunia
webdunia

ಮದುವೆ ಬಳಿಕ ಮಕ್ಕಳಾಗಲು ಎಷ್ಟು ಸಮಯದ ಅಂತರವಿರಬೇಕು?

ಮದುವೆ ಬಳಿಕ ಮಕ್ಕಳಾಗಲು ಎಷ್ಟು ಸಮಯದ ಅಂತರವಿರಬೇಕು?
ಬೆಂಗಳೂರು , ಶುಕ್ರವಾರ, 5 ಅಕ್ಟೋಬರ್ 2018 (08:50 IST)
ಬೆಂಗಳೂರು: ಮದುವೆ ಬಳಿಕ ಎಲ್ಲರೂ ಕೇಳುವ ಪ್ರಶ್ನೆ ಏನೂ ವಿಶೇಷ ಇಲ್ವಾ? ಇಂದಿನ ಜಗತ್ತಿನಲ್ಲಿ ತಮ್ಮ ವೃತ್ತಿ ಬದುಕಿನಲ್ಲಿ ಮುಳುಗಿರುವ ಮಹಿಳೆಯರು ಬೇಗನೇ ಹಡೆಯಲು ಇಷ್ಟಪಡುವುದಿಲ್ಲ.

ಹಾಗಿದ್ದರೆ ಮದುವೆಯಾದ ಮೇಲೆ ಎಷ್ಟು ಮಕ್ಕಳ ಮಾಡಿಕೊಳ್ಳಲು ಎಷ್ಟು ಸಮಯದ ಅಂತರ ಕೊಟ್ಟರೆ ಚೆನ್ನ? ಸಾಮಾನ್ಯವಾಗಿ ಮಹಿಳೆಯರು 20 ರ ಹರೆಯದಲ್ಲಿ ಹೆಚ್ಚು ಫಲವಂತಿಕೆ ಹೊಂದಿರುತ್ತಾರೆ. 35 ವಯಸ್ಸು ದಾಟಿದ ಮೇಲೆ ಅವರ ಫಲವಂತಿಕೆ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಕೆಲವರಿಗೆ ಬೇಗನೇ ಫಲವಂತಿಕೆ ನಷ್ಟವಾಗುವುದೂ ಇದೆ. ಇದು ಒಬ್ಬೊಬ್ಬರ ದೇಹದ ಮೇಲೆ ಅವಲಂಬಿತವಾಗಿರುತ್ತದೆ.

ತಜ್ಞರ ಪ್ರಕಾರ ಮದುವೆಯಾದ ಬಳಿಕ 6-8 ತಿಂಗಳ ಅಂತರ ಕೊಟ್ಟು ನಂತರ ಗರ್ಭಿಣಿಯಾಗುವುದು ಸೂಕ್ತ. ಈ ಸಂದರ್ಭದಲ್ಲಿ ದಂಪತಿ ಪರಸ್ಪರ ಹೊಂದಿಕೊಂಡಿರುತ್ತಾರೆ. ಹಾಗೆಯೇ ಈ ಸಂದರ್ಭದೊಳಗೆ ಗರ್ಭಿಣಿಯಾಗದೇ ಇದ್ದಾಗ ಕಡೆಗಣಿಸದೇ ಸಮಸ್ಯೆ ಏನೆಂದು ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎನ್ನುವುದು ತಜ್ಞರ ಅಭಿಮತ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನದಲ್ಲಿ ಪ್ರಯಾಣಿಸುವಾಗ ಮದ್ಯಪಾನ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ?