ಹಣ್ಣುಗಳ ಸೇವನೆಯ ಅಭ್ಯಾಸದಿಂದ ನಮ್ಮ ದೇಹಕ್ಕೆ ತರಕಾರಿಗಳನ್ನು ತಿಂದಾಗ ಸಿಗದ ಎಷ್ಟೋ ಪೋಷಕಾಂಶಗಳು ದೊರಕುತ್ತವೆ. ಅಂತಹ ಹಣ್ಣುಗಳ ಪಟ್ಟಿಗೆ ಕಪ್ಪು ದ್ರಾಕ್ಷಿ ಸೇರುತ್ತದೆ. ಕಪ್ಪು ದ್ರಾಕ್ಷಿಯು ಕೊಂಚ ಹುಳಿಯೇ ಆದರೂ ಅದರ ಗಾಢ ಬಣ್ಣ ಹಾಗೂ ಇದರಲ್ಲಿರುವ ಪೋಷಕಾಂಶಗಳು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತವೆ.
* ದೃಷ್ಟಿ ಮತ್ತು ಮೆಮೊರೆ ಸುಧಾರಣೆಗೆ ದ್ರಾಕ್ಷಿ ಹಣ್ಣು ಸಹಾಯ ಮಾಡುತ್ತದೆ.
* ಕಪ್ಪು ದ್ರಾಕ್ಷಿಯ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರಲ್ಲಿರುವ ಪೋಷಕಾಂಶವು ದೇಹದಲ್ಲಿ ಇನ್ಸುಲಿನ್ ಉತ್ಪನ್ನಕ್ಕೆ ಹೆಚ್ಚಿನ ಪ್ರಚೋದನೆಯನ್ನು ನೀಡುತ್ತದೆ.
* ಕಪ್ಪು ದ್ರಾಕ್ಷಿ ಹಣ್ಣುಗಳಲ್ಲಿ ಇನ್ಸುಲಿನ್ ಸ್ರವಿಸುವಿಕೆ ಮತ್ತು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುವ ಗುಣ ಇರುವುದರಿಂದ ದೇಹದಲ್ಲಿ ರಕ್ತದ ಸಕ್ಕರೆ ಮಟ್ಟ ಸಮತೋಲನದಿಂದ ಮತ್ತು ಇನ್ಸುಲಿನ್ ಮಟ್ಟವು ಸುಧಾರಣೆಯಾಗುತ್ತದೆ.
* ಕಪ್ಪು ದ್ರಾಕ್ಷಿಯು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
* ನಿಯಮಿತವಾಗಿ ಕಪ್ಪು ದ್ರಾಕ್ಷಿಯನ್ನು ಸೇವಿಸುವುದರಿಂದ ಏಕಾಗ್ರತೆ, ಸ್ಮರಣಶಕ್ತಿ ಹೆಚ್ಚುವುದು ಮತ್ತು ಮೈಗ್ರೇನ್ ಕಡಿಮೆಯಾಗಲು ನೆರವಾಗುತ್ತದೆ.
* ಕಪ್ಪು ದ್ರಾಕ್ಷಿಯು ಮೆದುಳಿನ ರಕ್ಷಕನಾಗಿ ಕಾರ್ಯನಿರ್ವಹಿಸುವುದರಿಂದ ಬುದ್ಧಿಮಾಂದ್ಯತೆ, ಮರೆಗುಳಿತನದಂತಹ ಖಾಯಿಲೆಗಳಂತಹ ತೊಂದರೆಗಳಿಂದ ರಕ್ಷಿಸುತ್ತದೆ.
* ಕಪ್ಪು ದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಹೃದಯದ ಮೇಲಾಗುವ ಹಾನಿಯನ್ನು ತಡೆದು ಹೃದಯದ ಸ್ನಾಯುಗಳನ್ನು ಬಲಪಡಿಸಲು ನೆರವಾಗುತ್ತವೆ.
* ದೇಹದಲ್ಲಿರುವ ಕೊಬ್ಬಿನ ಮಟ್ಟಗಳನ್ನು ಕಡಿಮೆ ಮಾಡಿ ನಿಯಂತ್ರಣದಲ್ಲಿಡಲು ಹೃದಯಸಂಬಂಧಿ ರೋಗಗಳಿಂದ ರಕ್ಷಣೆ ಒದಗಿಸುತ್ತದೆ.
* ಚರ್ಮ, ಪ್ರಾಸ್ಟೇಟ್, ಸ್ತನ, ಶ್ವಾಸಕೋಶ ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಮತ್ತು ಚಿಕಿತ್ಸೆಯಲ್ಲಿ ಕಪ್ಪು ದ್ರಾಕ್ಷಿಯ ಸೇವನೆಯು ಹೆಚ್ಚು ಲಾಭದಾಯಕವಾಗಿದೆ.
* ಕಪ್ಪು ದ್ರಾಕ್ಷಿಯಲ್ಲಿರುವ ಕ್ಯಾರೊಟಿನಾಯ್ಡ್ ಪೋಶಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಸಹಾಯಕವಾಗಿದೆ. ಈ ಹಣ್ಣಿನ ನಿಯಮಿತ ಸೇವನೆಯಿಂದ ಕುರುಡುತನ ಎದುರಾಗದಂತೆ ತಡೆಯಬಹುದು.
* ಈ ದ್ರಾಕ್ಷಿಗಳಲ್ಲಿರುವ ಲ್ಯುಟೆಯಿನ್ ಮತ್ತು ಝೆಂಕ್ಸಾಂಥಿನ್ ಅಂಶವು ಉತ್ತಮ ದೃಷ್ಟಿಗೆ ಸಹಾಯ ಮಾಡುತ್ತದೆ.
* ಕಪ್ಪು ದ್ರಾಕ್ಷಿಗಳಲ್ಲಿ ಕಂಡುಬರುವ ಸಂಯುಕ್ತ ಪೋಷಕಾಂಶಗಳು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
* ಕಪ್ಪು ದ್ರಾಕ್ಷಿಗಳಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ದೇಹದಲ್ಲಿ ಸಂಗ್ರಹವಾದ ಅನಗತ್ಯ ಜೀವಾಣುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
* ಕಪ್ಪು ದ್ರಾಕ್ಷಿಗಳಲ್ಲಿ ವಿಟಾಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ನೆತ್ತಿಯ ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
* ಕೂದಲು ಉದುರುವಿಕೆ, ವಿಭಜಿತ ತುದಿಗಳು ಮತ್ತು ಅಕಾಲಿಕ ಕೂದಲು ನೆರೆಯುವುದರಿಂದ ರಕ್ಷಣೆ ಒದಗಿಸುವುದಲ್ಲದೇ ತುರಿಕೆ, ತಲೆಹೊಟ್ಟು ಉಂಟಾಗದಿರಲು ನೆರವಾಗುತ್ತದೆ.
* ಕಪ್ಪು ದ್ರಾಕ್ಷಿಗಳಲ್ಲಿರುವ ವಿಟಾಮಿನ್ ಕೆ ಮತ್ತು ಎ ಖನಿಜಗಳು ಸಕ್ಕರೆ ಮತ್ತು ಸಾವಯವ ಆಮ್ಲಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
* ಕಪ್ಪು ದ್ರಾಕ್ಷಿಯಲ್ಲಿರುವ ಕರಗುವ ನಾರು ಪ್ರಮುಖವಾಗಿ ಮಲಬದ್ಧತೆ, ಅಜೀರ್ಣ ಮ್ತತು ಮೂತ್ರಪಿಂಡದಲ್ಲಿನ ಕಲ್ಲುಗಳ ತೊಂದರೆಯೂ ಶಮನವಾಗುತ್ತದೆ.
* ಕಪ್ಪು ದ್ರಾಕ್ಷಿಗಳಲ್ಲಿ ವಿಟಾಮಿನ್ ಸಿ ಮತ್ತು ವಿಟಾಮಿನ್ ಇ ಇದ್ದು ಇದು ಚರ್ಮದಿಂದ ನಷ್ಟವಾಗಿದ್ದ ಜೀವಕೋಶಗಳನ್ನು ಹೊಸದಾಗಿ ನಿರ್ಮಿಸಲು ನೆರವಾಗುತ್ತದೆ.
* ಕಪ್ಪು ದ್ರಾಕ್ಷಿಗಳು ತೇವಾಂಶವನ್ನು ಚರ್ಮದಲ್ಲಿ ಉಳಿಸಿಕೊಳ್ಳಲು ನೆರವಾಗುವ ಮೂಲಕ ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ.
* ಕಪ್ಪು ದ್ರಾಕ್ಷಿಯನ್ನು ಹಸಿಯಾಗಿಯೂ, ಒಣಗಿಸಿ ಒಣಗಿಸಿ ಒಣದ್ರಾಕ್ಷಿಯ ರೂಪದಲ್ಲಿಯೂ ಬಳಸಬಹುದು.