Select Your Language

Notifications

webdunia
webdunia
webdunia
webdunia

ಪೊಲೀಸ್ ಠಾಣೆಯಲ್ಲೇ ಪೇದೆಯಿಂದ ಅನಾಥ ಬಾಲಕನಿಗೆ ಲೈಂಗಿಕ ಕಿರುಕುಳ

ಪೊಲೀಸ್ ಠಾಣೆಯಲ್ಲೇ  ಪೇದೆಯಿಂದ ಅನಾಥ ಬಾಲಕನಿಗೆ ಲೈಂಗಿಕ ಕಿರುಕುಳ
ಲಖನೌ , ಗುರುವಾರ, 4 ಅಕ್ಟೋಬರ್ 2018 (08:17 IST)
ಲಖನೌ : ಪೊಲೀಸ್ ಠಾಣೆಯಲ್ಲೇ  ಪೇದೆಯೊಬ್ಬ ಸುಮಾರು 25 ದಿನಗಳ ಕಾಲ ಅನಾಥ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.

ಸಂಜೇಶ್​ ಯಾದವ್ (45 ವರ್ಷ) ಅನಾಥ ಬಾಲಕನ ಮೇಲೆ ಅಸಹಜ ಲೈಂಗಿಕ ದಾಳಿ ನಡೆಸಿದಾತ. ಈತ ಚಾಮದ್​ ಪೊಲೀಸ್​ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಒಂದು ದಿನ ಗಸ್ತು ವೇಳೆ ಹೋಟೆಲ್​ವೊಂದಕ್ಕೆ ಭೇಟಿ ನೀಡಿದಾಗ ಆ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಅನಾಥ ಬಾಲಕ ಇತನ ಕಣ್ಣಿಗೆ ಬಿದ್ದಿದ್ದಾನೆ. ವಿಚಾರಣೆ ನೆಪದಲ್ಲಿ ಆ ಬಾಲಕನನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ ಸಂಜೇಶ್​ ಯಾದವ್ ಸೆಪ್ಟಂಬರ್​ 9 ರಿಂದ ಅಕ್ಟೋಬರ್​ 1ರವರೆಗೆ ಪ್ರತಿನಿತ್ಯ ಬಾಲಕನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದನು.

 

ಆದರೆ ಗಾಂಧಿ ಜಯಂತಿ ನಿಮಿತ್ತ  ಹಿರಿಯ ಪೊಲೀಸ್​ ಅಧಿಕಾರಿಗಳು ಚಾಮದ್​ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಬಾಲಕ ತನ್ನ ನೋವುಗಳನ್ನು ತೋಡಿಕೊಂಡಿದ್ದಾನೆ. ಬಾಲಕ,  ಲೈಂಗಿಕ ಕ್ರಿಯೆಗೆ ಗುರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಕಾರಣ ಕೂಡಲೇ ಹಿರಿಯ ಅಧಿಕಾರಿಗಳು ಪೊಲೀಸ್​ ಪೇದೆ ಸಂಜೇಶ್​ನ್ನು ಅಮಾನತುಗೊಳಿಸಿ, ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ; ವಾಟ್ಸ್ ಆ್ಯಪ್ ನಲ್ಲಿ ವಿಡಿಯೋ ವೈರಲ್