Select Your Language

Notifications

webdunia
webdunia
webdunia
webdunia

ಕರ್ತವ್ಯದಲ್ಲಿದ್ದ ಕಿರಿಯ ವೈದ್ಯಳ ಮೇಲೆ ಅತ್ಯಾಚಾರ ಎಸಗಿದ ಹಿರಿಯ ವೈದ್ಯ

ಕರ್ತವ್ಯದಲ್ಲಿದ್ದ ಕಿರಿಯ ವೈದ್ಯಳ ಮೇಲೆ ಅತ್ಯಾಚಾರ ಎಸಗಿದ ಹಿರಿಯ ವೈದ್ಯ
ಗುಜರಾತ್ , ಬುಧವಾರ, 26 ಸೆಪ್ಟಂಬರ್ 2018 (07:08 IST)
ಗುಜರಾತ್: ಹಿರಿಯ ವೈದ್ಯನೊಬ್ಬ ಕರ್ತವ್ಯದಲ್ಲಿದ್ದಾಗ ತನ್ನ ಸಹೋದ್ಯೋಗಿ ಕಿರಿಯ ವೈದ್ಯಳೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗುಜರಾತಿನ ರಾಜ್‍ಕೋಟ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.


ಸಚಿನ್ ಸಂತೋಷ್ ಕುಮಾರ್ ಸಿಂಗ್(28 ವರ್ಷ) ಈ ಕೃತ್ಯ ಎಸಗಿದ ಆರೋಪಿ. ಇತ ಹಾಗೂ ಸಂತ್ರಸ್ತೆ ಇಬ್ಬರು ಆಗಸ್ಟ್ 31 ರಂದು ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿ ಸಿಂಗ್ ಆಸ್ಪತ್ರೆಯ ಐದನೇ ಮಹಡಿಗೆ ವೈದ್ಯರು ವಿಶ್ರಾಂತಿ ಪಡೆಯುವ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ್ದಲ್ಲದೇ ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಕೂಡ ಒಡ್ಡಿದ್ದನು. ಆದ್ದರಿಂದ ಸಂತ್ರಸ್ತೆ ಸಮಾಜಕ್ಕೆ ಹೆದರಿ ಈ ಬಗ್ಗೆ ದೂರು ದಾಖಲಿಸಲಿಲ್ಲ ಎಂಬುದಾಗಿ  ತಿಳಿದುಬಂದಿದೆ.


ನಂತರ ಸಂತ್ರಸ್ತೆಯ ತಂದೆ ಈ ವಿಚಾರವನ್ನು ಪೊಲೀಸ್ ಕಮಿಷನರ್ ಬಳಿ ಹೇಳಿ ಪ್ರದ್ಯುಮ್ನನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ಅಹಮದಾಬಾದಿನಲ್ಲಿದ್ದ ಅವನ ಮನೆಯಲ್ಲಿಯೇ ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯನ್ನು ಎಳೆದ್ಯೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು