Select Your Language

Notifications

webdunia
webdunia
webdunia
webdunia

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯನ್ನು ಎಳೆದ್ಯೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯನ್ನು ಎಳೆದ್ಯೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು
ಬಿಹಾರ , ಬುಧವಾರ, 26 ಸೆಪ್ಟಂಬರ್ 2018 (07:05 IST)
ಬಿಹಾರ : ನಾಲ್ಕು ಜನ ದುಷ್ಕರ್ಮಿಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೊಬ್ಬಳನ್ನು ನಿರ್ಜನ ಪ್ರದೇಶಕ್ಕೆ ಎಳೆದ್ಯೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರ್ ನಲ್ಲಿ ನಡೆದಿದೆ.


ಗುರುವಾರ ರಾತ್ರಿ 7 ಗಂಟೆಯ ವೇಳೆ ತನ್ನ ಸಂಬಂಧಿಕರ ಮನೆಗೆ ರೈಲಿನಲ್ಲಿ ತೆರಳುತ್ತಿದ್ದ ಬಾಲಕಿಯೊಬ್ಬಳನ್ನು ಹಿಂಬಾಲಿಸಿಕೊಂಡು ಬಂದ ಆಕೆಯ ಗ್ರಾಮದ ನಾಲ್ಕು ಜನ ಯುವಕರು ರೈಲು ನಿಂತಾಗ ಅಲ್ಲಿಂದ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದ್ಯೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.


ನಂತರ ಆಕೆಯನ್ನು ಸ್ಕೂಲ್​ವೊಂದರ ಬಳಿ ಬಿಟ್ಟು, ಈ ವಿಷಯ ಯಾರಿಗೂ ತಿಳಿಸಬೇಡ. ಒಂದು ವೇಳೆ ತಿಳಿಸಿದ್ರೆ ನಿಮ್ಮ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ. ಆದ್ರೆ ಬಾಲಕಿ ನಡೆದಿದ್ದಲ್ಲವನ್ನು ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಬಾಲಕಿ ಮತ್ತು ಪೋಷಕರು ಮಹಿಳಾ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ  ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿ ಮಾಡಿದ ತಪ್ಪಿಗೆ ಈ ಪ್ರೇಮಿಗಳಿಗೆ ಮನೆಯವರಿಂದ ಸಿಕ್ಕ ಶಿಕ್ಷೆ ಏನು ಗೊತ್ತಾ?