Select Your Language

Notifications

webdunia
webdunia
webdunia
webdunia

ಮಗಳ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ ನೀಚ ತಂದೆ

ಮಗಳ  ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ ನೀಚ ತಂದೆ
ರಾಜಸ್ತಾನ , ಶನಿವಾರ, 29 ಸೆಪ್ಟಂಬರ್ 2018 (07:24 IST)
ರಾಜಸ್ಥಾನ : ತಂದೆಯೇ ತನ್ನ 14 ವರ್ಷದ ಮಗಳ  ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ  ಛಿತ್ತೋರ್ ಗಢದಲ್ಲಿ ನಡೆದಿದೆ.


ಈ ವಿಚಾರವನ್ನು ಸಂತ್ರಸ್ತೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. 'ನನ್ನ ತಾಯಿ ಮದುವೆ ಸಮಾರಂಭಕ್ಕೆ ಬೇರೆ ಊರಿಗೆ ಹೋಗಿದ್ದರು. ಆ ದಿನ ನನ್ನ ಕಿರಿಯ ಸಹೋದರಿಯೊಂದಿಗೆ ರೂಮಿನಲ್ಲಿ ಮಲಗಿದ್ದ ವೇಳೆ ನನ್ನ ತಂದೆ ಬಂದು ಪಕ್ಕ ಮಲಗಿದರು. ಬಳಿಕ, ಖಾಸಗಿ ಅಂಗಾಂಗಗಳನ್ನು ಮುಟ್ಟಲು ಆರಂಭಿಸಿದ್ದು, ಎಷ್ಟೇ ನಿರಾಕರಿಸಿದರೂ ಸಹ ಲೈಂಗಿಕ ಕಿರುಕುಳ ನೀಡುವುದನ್ನು ಮುಂದುವರಿಸಿದರು. ತಾಯಿಗೆ ಈ ಬಗ್ಗೆ ಹೇಳಿದರೂ ಸಹ ಅವರು ತನ್ನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಾಗಿ ತನಗೇ ಬೈಯ್ದರು. ಮೊಹರಂ ದಿನವೂ, ತಾಯಿ ಊರಿನಿಂದ ಹೊರಗೆ ಹೋಗಿದ್ದಾಗ ತಂದೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದರು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.


ಈ ವಿಚಾರವನ್ನು ಮಕ್ಕಳ ಸಹಾಯವಾಣಿಯ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದ್ದು, ಬಳಿಕ ಮಹಿಳಾ ಠಾಣೆಯ ಪೊಲೀಸರು ಬಾಲಕಿ ಮನೆಗೆ ಭೇಟಿ ನೀಡಿ ಲಿಖಿತ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ ಆಕೆಯ ತಂದೆಯ ವಿರುದ್ಧ ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಪೋಷಕರ ಜತೆಗೆ ವಾಸ ಮಾಡಲು ಇಚ್ಛಿಸುತ್ತೇನೆ. ಆದರೆ, ಸುರಕ್ಷಿತ ಪರಿಸರದಲ್ಲಿ ಜೀವಿಸಬೇಕು ಎಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಪೇದೆಯ ಮೇಲೆ ಅತ್ಯಾಚಾರ ಎಸಗಿದ ಸಬ್ ಇನ್ಸ್‌ಪೆಕ್ಟರ್