Select Your Language

Notifications

webdunia
webdunia
webdunia
webdunia

ಯುವತಿಯ ಸಾವಿಗೆ ಕಾರಣವಾಯ್ತು ಆಕೆಯ ಫೇಸ್ ಬುಕ್ ಫೋಟೊ

ಯುವತಿಯ ಸಾವಿಗೆ ಕಾರಣವಾಯ್ತು ಆಕೆಯ ಫೇಸ್ ಬುಕ್ ಫೋಟೊ
ಜಾರ್ಖಂಡ್ , ಶನಿವಾರ, 29 ಸೆಪ್ಟಂಬರ್ 2018 (07:04 IST)
ಜಾರ್ಖಂಡ್ : ತನ್ನ ಫೇಸ್ ಬುಕ್ ಫೋಟೊವನ್ನು ತಂದೆ ಲೈಕ್ ಮಾಡಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.


ಯುವತಿ ತನ್ನ ಫೇಸ್ ಬುಕ್ ಫೇಜ್ ನಲ್ಲಿ ತನ್ನ ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾಳೆ. ಎಲ್ಲರೂ ಈ ಫೊಟೊ ಗೆ ಲೈಕ್ ಕೊಟ್ಟರೂ ಆಕೆಯ ತಂದೆ ಮಾತ್ರ ಲೈಕ್ ಕೊಡಲಿಲ್ಲವಂತೆ. ಅಲ್ಲದೇ ಫೇಸ್​ಬುಕ್​ನಲ್ಲಿ ಫೋಟೋ ಪೋಸ್ಟ್ ಮಾಡಿದ ದಿನದಿಂದ ಆಕೆಯ ತಂದೆ ಆಕೆಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರಂತೆ.


ತಂದೆ ಎಲ್ಲರೊಂದಿಗೂ ಸಹಜವಾಗಿ ವರ್ತಿಸುತ್ತಿದ್ದು, ತನ್ನ ಜೊತೆ ಮಾತ್ರ ಮಾತನಾಡುತ್ತಿರಲಿಲ್ಲ ಎಂದು ಮನನೊಂದು ಯುವತಿ ನೇಣು ಹಾಕಿಕೊಂಡಿದ್ದಾಳೆ ಎಂಬ ವಿಚಾರ ಆಕೆಯ ಆಪ್ತರಿಂದ ತಿಳಿದುಬಂದಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಬರ್ವಾದ್ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಚೋರ್ ಎಂದು ಪುನರುಚ್ಛಸಿದ ಖರ್ಗೆ