Publish Date: Mon, 12 Apr 2021 (08:37 IST)
Updated Date: Mon, 12 Apr 2021 (08:39 IST)
ಅಲಿಗರ್ : ಮಹಿಳೆಯೊಬ್ಬಳು ತನ್ನನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾರೆ ಎಂದು ಆರೋಪಿಸಿ ಪತಿ ಮತ್ತು ಆತನ ಇಬ್ಬರು ಸಹೋದರಿಯರ ವಿರುದ್ಧ ದೂರು ದಾಖಲಿಸಿದ್ದಾರೆ.
ದೆಹಲಿಯಲ್ಲಿ ಉದ್ಯೋಗ ಮಾಡುತ್ತಿದ್ದ ಮಹಿಳೆ ವ್ಯಕ್ತಿಯೊಬ್ಬನ ಪರಿಚಯವಾಗಿ ಆತನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಅವರಿಗೆ ಒಂದು ಹೆಣ‍್ಣು ಮಗುವಿದೆ. ಆದರೆ ಬಳಿಕ ಅವರನ್ನು ಆತ ತನ್ನ ಊರಿಗೆ ಕರೆದುಕೊಂಡು ಬಂದಾಗ ಅವನು ಮುಸ್ಲಿಂ ಧರ್ಮದವರು ಎಂದು ತಿಳಿದಿಬಂದಿದೆ.
ಅಲ್ಲದೇ ಆತನ ಮನೆಯವರು ಅವಳಿಗೆ , ಕುರಾನ್ ಓದುವಂತೆ ನಮಾಜ್ ಮಾಡುವಂತೆ ಒತ್ತಾಯಿಸಿದ್ದಾರೆ.
ಇದರಿಂದ ಬೇಸತ್ತ ಮಹಿಳೆ ಪತಿ ಮತ್ತು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.