Publish Date: Thu, 12 May 2022 (09:50 IST)
Updated Date: Thu, 12 May 2022 (10:16 IST)
ಲಕ್ನೋ: ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮಹಿಳೆ ಮೇಲೆ ಸಿಬ್ಬಂದಿಯೇ ಅತ್ಯಾಚಾರವೆಸಗಿದ ಹೀನ ಕೃತ್ಯ ಉತ್ತರಪ್ರದೇಶದಲ್ಲಿ ನಡೆದಿದೆ.
ಮೂರು ತಿಂಗಳ ಗರ್ಭಿಣಿ ಗಂಡನ ಜೊತೆಗೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಬಂದಿದ್ದಳು. ಈ ವೇಳೆ ಶೌಚಾಲಯಕ್ಕೆ ಹೋಗಿದ್ದಾಗ ಅಲ್ಲಿದ್ದ ಕ್ಲೀನಿಂಗ್ ಸಿಬ್ಬಂದಿ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ.
ಆಕೆ ಕಿರುಚಿಕೊಂಡಾಗ ಆರೋಪಿ ಓಡಿ ಹೋಗಿದ್ದಾನೆ. ಮನೆಗೆ ಹೋದ ಬಳಿಕ ಮಹಿಳೆ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.