Publish Date: Thu, 21 Jul 2022 (08:50 IST)
Updated Date: Thu, 21 Jul 2022 (08:58 IST)
ತಿರುವನಂತಪುರಂ: ಹಣಕ್ಕಾಗಿ ಅಂಡಾಣು ಮಾರಿಕೊಳ್ಳಲು ವಿವಾಹಿತ ಮಹಿಳೆಗೆ ಆಕೆಯ ಸ್ನೇಹಿತೆ ಮತ್ತು ಆಕೆಯ ಗಂಡ ಕಿರುಕುಳ ಕೊಟ್ಟ ಘಟನೆ ಕೇರಳದಲ್ಲಿ ನಡೆದಿದೆ.
2 ವರ್ಷದ ಮಗುವಿನ ತಾಯಿಯಾಗಿರುವ ಸಂತ್ರಸ್ತ ಮಹಿಳೆ ಗಂಡನೊಂದಿಗೆ ಜಗಳ ಮಾಡಿಕೊಂಡು ಸ್ನೇಹಿತೆ ಮನೆಗೆ ಬಂದಿದ್ದಳು. ಆರಂಭದಲ್ಲಿ ಆಕೆಯನ್ನು ಆದರದಿಂದ ಸ್ವಾಗತಿಸಿದ್ದ ಸ್ನೇಹಿತೆ ಬಳಿಕ ಗಂಡನ ಜೊತೆ ಸೇರಿಕೊಂಡು ಸಂತ್ರಸ್ತೆಯನ್ನು ರೂಂನಲ್ಲಿ ಕೂಡಿ ಹಾಕಿದ್ದಳು.
ಬಳಿಕ ಹಣಕ್ಕಾಗಿ ಅಂಡಾಣು ಮಾರಾಟ ಮಾಡುವಂತೆ ಚಿತ್ರಹಿಂಸೆ ನೀಡಿದ್ದಳು. ಕೊನೆಗೆ ಗಂಡ-ಹೆಂಡತಿ ಮನೆಯಲ್ಲಿಲ್ಲದಿದ್ದಾಗ ಅದು ಹೇಗೋ ತಪ್ಪಿಸಿಕೊಂಡು ಮರಳಿ ಗಂಡನ ಬಳಿ ಬಂದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.