Select Your Language

Notifications

webdunia
webdunia
webdunia
webdunia

ಬೀದಿಬದಿ ವ್ಯಾಪಾರಿಗಳನ್ನ ಕಡೆಗಣಿಸಿದ ಸರ್ಕಾರದ ವಿರುದ್ಧ ವ್ಯಾಪಾರಿಗಳ ಆಕ್ರಂದನ

ಬೀದಿಬದಿ ವ್ಯಾಪಾರಿಗಳನ್ನ ಕಡೆಗಣಿಸಿದ ಸರ್ಕಾರದ ವಿರುದ್ಧ ವ್ಯಾಪಾರಿಗಳ ಆಕ್ರಂದನ
bangalore , ಬುಧವಾರ, 20 ಜುಲೈ 2022 (20:48 IST)
ಬೀದಿ ವ್ಯಾಪಾರಿಗಳನ್ನು ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಿರುವ ಕೇಂದ್ರ ಸರ್ಕಾರ  ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ತರುವಲ್ಲಿ ವಿಫಲವಾಗುವ ಮೂಲಕ ರಾಜ್ಯ ಸರ್ಕಾರ ಬೀದಿ ಬದಿ ವ್ಯಾಪಾರಿಗಳನ್ನು ನಿರ್ಲಕ್ಷಿಸುತ್ತಿದೆ.
 
 ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ರಂಗಸ್ವಾಮಿ ಅವರು, ಕೊರೋನಾ ಭೀತಿ ಕಡಿಮೆಯಾದರೂ ಬೀದಿ ಬದಿ ವ್ಯಾಪಾರಿಗಳ ಆರ್ಥಿಕತೆ ಚೇತರಿಕೆ ಆಗಿಲ್ಲ. ಕಾರಣ ರಾಜ್ಯ ಸರ್ಕಾರ ವಹಿಸಿರುವ ನಿರ್ಲಕ್ಷ್ಯ ಎಂದು ದೂರಿದರು.
 
ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗಾಗಿ ಸಾಲ ಸೌಲಭ್ಯ, ಸಮೀಕ್ಷೆ, ಗುರುತಿನ ಚೀಟಿ ವಿತರಣೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ರಾಜ್ಯದಲ್ಲಿ ಅವುಗಳು ಅನುಷ್ಠಾನಕ್ಕೆ ಬಾರದ್ದರಿಂದ ರಸ್ತೆ ಬದಿ ವ್ಯಾಪಾರಿಗಳು ಜೀವ ದುಸ್ತರವಾಗಿದೆ. ರಾಜ್ಯದಲ್ಲಿರುವ 272 ನಗರ ಸಂಸ್ಥೆಯ ಅಡಿಯಲ್ಲಿ ಪಟ್ಟಣ ವ್ಯಾಪಾರಿ ಸಮಿತಿ ಸಭೆ ನಡೆಸಬೇಕು.ಸಭೆಯಲ್ಲಿ ಪಾಲ್ಗೊಳ್ಳುವ ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ವ್ಯವಸ್ಥಾಪಕರು, ಪಾಲಿಕೆ ಅಧಿಕಾರಿಗಳು, ಕೌಶಲ್ಯಾಭಿವೃದ್ಧಿ ಇಲಾಖೆ ಸೇರಿದಂತೆ ಸಂಬಂಧಿತ ಮುಖ್ಯಸ್ಥರು ವ್ಯಾಪಾರಿಗಳ ಸಮಸ್ಯೆ ಚರ್ಚಿಸಬೇಕು. ರಾಜ್ಯಾದ್ಯಂತ ವ್ಯಾಪಾರಿಗಳ ಸೂಕ್ತ ಸಮೀಕ್ಷೆ ನಡೆಸಿ ವ್ಯಾಪಾರಕ್ಕೆ ಅನುಮತಿ, ವ್ಯವಸ್ಥಿತ ಮಾರುಕಟ್ಟೆ, ಪರವಾನಿಗೆ ನೀಡಬೇಕು. ಸಮಿತಿ ಸದಸ್ಯರಿಗೆ ಭತ್ಯೆ ನೀಡಬೇಕು. ಪಿಎಂ ಸ್ವನಿಧಿ ಯೋಜನೆಯಡಿ ಸಾಲ ನೀಡದ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ವ್ಯಾಪಾರಿಗಳ ಬದುಕಿಗೆ ಸ್ಪೂರ್ತಿಯಾಗಬೇಕು ಎಂದರು.
 
ಆದರೆ ಇದ್ಯಾವುದು ಸಮರ್ಪಕವಾಗಿ ನಡೆಯುದೇ ವರ್ಷಗಳೆ ಕಳೆದಿವೆ. ರಾಜ್ಯದ 272ನಗರ ಸಂಸ್ಥೆಯಗಳ ವ್ಯಾಪ್ತಿಯಲ್ಲಿ ಟಿವಿಸಿ ಸಭೆ ಸರಿಯಾಗಿ ನಡೆಯುತ್ತಿಲ್ಲ. ಇನ್ನು ಬೆಂಗಳೂರಿನ ಎಂಟು ವಲಯಗಳ ಪೈಕಿ ಪಶ್ಚಿಮ ವಲಯ, ಪೂರ್ವ, ದಕ್ಷಿಣ ಮತ್ತು ಆರ್‌ಆರ್‌ ನಗರಗಳಲ್ಲಿ ಮಾತ್ರ ಸಭೆ ನಡೆದಿವೆ. ಉಳಿದಂತೆ ದಾಸರಹಳ್ಳಿ ವಲಯ, ಯಲಹಂಕ, ಮಹದೇವಪುರ ಹಾಗೂ ಬೊಮ್ಮನಹಳ್ಳಿಯಲ್ಲಿ ಸಭೆ ನಡೆಸುವಲ್ಲಿ ಬಿಬಿಎಂಪಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ