Select Your Language

Notifications

webdunia
webdunia
webdunia
webdunia

ಮಲಮಕ್ಕಳ ಮೇಲಿನ ಧ್ವೇಷಕ್ಕೆ ಹೆಂಡತಿ ಕುತ್ತಿಗೆಗೆ ಚಾಕು ಹಾಕಿದ ಗಂಡ

ಮಲಮಕ್ಕಳ ಮೇಲಿನ ಧ್ವೇಷಕ್ಕೆ ಹೆಂಡತಿ ಕುತ್ತಿಗೆಗೆ ಚಾಕು ಹಾಕಿದ ಗಂಡ
ನವದೆಹಲಿ , ಬುಧವಾರ, 20 ಜುಲೈ 2022 (11:01 IST)
ನವದೆಹಲಿ: ಮಲಮಕ್ಕಳ ಮೇಲಿನ ಧ‍್ವೇಷಕ್ಕೆ ಹೆಂಡತಿಯ ಕುತ್ತಿಗೆಗೆ ಗಂಡ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ದೆಹಲಿಯಲ್ಲಿ ನಡೆದಿದೆ.

ವೃತ್ತಿಯಲ್ಲಿ ಚಾಲಕನಾಗಿದ್ದ ಆರೋಪಿ ಜೊತೆಗೆ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಳು. ಆದರೆ ಈ ಮಕ್ಕಳಿಗೆ ಆರೋಪಿ ಸದಾ ಕಿರುಕುಳ ನೀಡುತ್ತಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೂ ಜಗಳವಾಡುತ್ತಿದ್ದ.

ಇದೇ ಸಿಟ್ಟಿನಲ್ಲಿ ರಾತ್ರಿ ಮಲಗಿದ್ದಾಗ ಹೆಂಡತಿ ಕುತ್ತಿಗೆಗೆ ಚಾಕುವಿನಿಂದ ಇರಿದ ಗಂಡ ಬಳಿಕ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಸ್ವತಃ ಮಹಿಳೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಳು. ಇದೀಗ ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಖಸಮ್ಮನೆ ವಾಹನ ತಡೆದ ಪೊಲೀಸ್ ಕಾನ್ಸ್ಟೇಬಲ್ ಸಸ್ಪೆಂಡ್