Publish Date: Mon, 18 Jul 2022 (10:59 IST)
Updated Date: Mon, 18 Jul 2022 (11:01 IST)
ಚೆನ್ನೈ: ತಾನು ಪ್ರೀತಿಸಿದ್ದ 15 ವರ್ಷದ ಬಾಲಕಿ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ 19 ವರ್ಷದ ಪಾಗಲ್ ಪ್ರೇಮಿ ವಿದ್ಯುತ್ ಕಂಬವೇರಿ ಕುಳಿತು ಪಟ್ಟು ಹಿಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಪೇಂಟರ್ ವೃತ್ತಿ ಮಾಡುತ್ತಿರುವ ಯುವಕ 15 ವರ್ಷದ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಮದುವೆಯಾಗಲು ನಿರಾಕರಿಸಿದ್ದಳು. ಹೀಗಾಗಿ ಆಕೆಯ ಮನ ಒಲಿಸಲು ವಿದ್ಯುತ್ ಕಂಬವೇರಿ ಕೂತಿದ್ದ.
ಇದರಿಂದಾಗಿ ಕೆಲವು ಕಾಲ ವಿದ್ಯುತ್ ಸ್ಥಗಿತಗೊಳಿಸಬೇಕಾಯಿತು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನ ಒಲಿಸಲು ಪ್ರಯತ್ನಿಸಿದರೂ ಆತ ಕೆಳಗಿಳಿದಿರಲಿಲ್ಲ. ಬಳಿಕ ಆತನ ಹುಡುಗಿಯನ್ನೇ ಸ್ಥಳಕ್ಕೆ ಕರೆಸಿ ಮದುವೆ ಭರವಸೆ ನೀಡಲಾಯಿತು.