Select Your Language

Notifications

webdunia
webdunia
webdunia
webdunia

ಕಾಲಿವುಡ್ ನಟಿ ಮದುವೆ ಖರ್ಚು ವೆಚ್ಚ ಕೇಳಿದ್ರೆ ಅಚ್ಚರಿ..!!!

Sandalwood
ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು ಅನ್ನೋ ಮಾತಿದೆ. ಇಂದಿನ ಕಾಲದಲ್ಲಿ ಮನೆ ನಿರ್ಮಾಣ ಮತ್ತು ಮದುವೆ ಎಂಬುದು ಸುಲಭದ ಮಾತೇ ಅಲ್ಲ. ಅದಕ್ಕಾಗಿ ಸಾಕಷ್ಟು ಹಣ ಬೇಕು. ಬಡ ಜನರಿಗಂತೂ ಇದು ಕಷ್ಟದ ಹಾದಿ. ಏಕೆಂದರೆ, ಮದುವೆ ಎಂಬುದು ಇಂದು ಸಂಬಂಧದ ಬೆಸುಗೆಯಾಗುವ ಬದಲು ಪ್ರತಿಷ್ಠೆಯ ಪ್ರದರ್ಶನವಾಗಿಬಿಟ್ಟಿದೆ
ರಾಜಕಾರಣಿಗಳು ಹಾಗೂ ದೊಡ್ಡ ಸೆಲೆಬ್ರಿಟಿಗಳ ಮದುವೆಗಳಲ್ಲಂತೂ ಅದ್ಧೂರಿತನವೇ ಎದ್ದು ಕಾಣುತ್ತಿರುತ್ತದೆ. ಆದರೆ, ಕೆಲವೊಂದಿಷ್ಟು ಮಂದಿ ಸರಳವಾಗಿ ಮದುವೆ ಆಗಿ ಸಮಾಜಕ್ಕೆ ಮಾದರಿ ಆಗುತ್ತಾರೆ. ಹೀಗ್ಯಾಕೆ ಈ ವಿಚಾರ ಅನ್ನೋ ಪ್ರಶ್ನೆಗೆ ಉತ್ತರ ಮುಂದಿದೆ.
 
ಕಾಳಿವುಡ್ ನಟಿ ಇಂದ್ರಜಾ ಅವರ ಬಗ್ಗೆ ಎಲ್ಲರಿಗೂ ತಿಳಿಯದೇ ಇದ್ದರೂ ಒಂದಿಷ್ಟು ಮಂದಿಗಂತೂ ಅವರ ಬಗ್ಗೆ ಗೊತ್ತಿಲ್ಲ. ಒಂದು ಕಾಲದಲ್ಲಿ ಇಂದ್ರಜಾ ಟಾಪ್ ಹೀರೋಯಿನ್ ಆಗಿದ್ದರು. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಟಿಸಿದ್ದಾರೆ. ಇವರು 2006ರಲ್ಲಿ ಉದ್ಯಮಿ ಮೊಹಮ್ಮದ್ ಅಬ್ಸರ್ ಎಂಬವರನ್ನು ಮದುವೆ ಆದರು. ಆ ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡರು. ಅವರು ಇತ್ತೀಚೆಗೆ ಸಿನಿಮಾ ರಂಗದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಟಿವಿ ಶೋ ಹಾಗೂ ಸಿನಿಮಾಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.
 
ನಟಿ ಹಾಗೂ ಸಚಿವೆ ರೋಜಾ ಅವರು ಜಬರ್ದಸ್ತ್ ಶೋ ಅನ್ನು ಬಿಟ್ಟ ಬಳಿಕ ಆ ಸ್ಥಾನಕ್ಕೆ ಇಂದ್ರಜಾ ಅವರು ಬಂದಿದ್ದಾರೆ. ಶೋನ ಮುಖ್ಯ ಜಡ್ಜ್ ಆಗಿದ್ದಾರೆ. ಇತ್ತೀಚೆಗೆ ಇಂದ್ರಜಾ ಅವರು ಜಬರ್ದಸ್ತ್ ಶೋನಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಪ್ರೋಮೋವೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ನನ್ನದು ಲವ್ ಮ್ಯಾರೇಜ್. ನಮ್ಮ ಮದುವೆ ಕೇವಲ 13 ಮಂದಿ ಅತಿಥಿಗಳು ಬಂದಿದ್ದರು. ನಮ್ಮ ಮದುವೆ ಖರ್ಚಾಗಿದ್ದರೆ, ಕೇವಲ 7500 ಸಾವಿರ ರೂಪಾಯಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಕ್ಕಳ ಜೊತೆ ಜಾನವಿ ಸಾರಾ ಡೇಟಿಂಗ್