Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಕ್ಕಳ ಜೊತೆ ಜಾನವಿ ಸಾರಾ ಡೇಟಿಂಗ್

ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಕ್ಕಳ ಜೊತೆ ಜಾನವಿ ಸಾರಾ ಡೇಟಿಂಗ್
ಬೆಂಗಳೂರು , ಶನಿವಾರ, 16 ಜುಲೈ 2022 (14:03 IST)
ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದ 7ನೇ ಸೀಸನ್​ನ ಎರಡನೇ ಎಪಿಸೋಡ್​ನಲ್ಲಿ ಬಾಲಿವುಡ್​ ನಟಿಯರಾದ ಸಾರಾ ಅಲಿ ಖಾನ್​ ಮತ್ತು ಜಾಹ್ನವಿ ಕಪೂರ್​ ಅತಿಥಿಗಳಾಗಿ ಒಟ್ಟಿಗೆ ಪಾಲ್ಗೊಂಡಿದ್ದರು.
ಸಾರಾ ಅಲಿ ಖಾನ್​ ಮತ್ತು ಜಾಹ್ನವಿ ಕಪೂರ್​ ಒಂದೇ ಕುಟುಂಬದ ಇಬ್ಬರು ಸಹೋದರರ ಜೊತೆ ಈ ಹಿಂದೆ ಡೇಟಿಂಗ್​ ಮಾಡಿದ್ದರು. ಅದರ ಬಗ್ಗೆ ಈ ಶೋನಲ್ಲಿ ಏನಾದರೂ ಹೇಳುತ್ತೀರಾ? ಎಂದು ಕರಣ್​ ಜೋಹರ್​ ಪ್ರಶ್ನಿಸಿದ್ದಕ್ಕೆ ಇಬ್ಬರು ದಿಗ್ಭ್ರಾಂತರಾದರು. ಇದೆಲ್ಲ, ಇವರಿಗೆ ಹೇಗೆ ಗೊತ್ತಾಯಿತು ಎಂದು ಒಂದು ಕ್ಷಣ ಗಲಿಬಿಲಿಗೊಂಡರು. ತಕ್ಷಣ ಜಾಹ್ನವಿ ಕಡೆ ನೋಡಿದ ಸಾರಾ, ಈ ಬಗ್ಗೆ ಕೇಳುತ್ತಾರೆ ಅಂತಾ ನಿನಗೆ ಮೊದಲೇ ತಿಳಿದಿತ್ತಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಾಹ್ನವಿ ನನಗೆ ಗೊತ್ತಿರಲಿಲ್ಲ ಎಂದರು. ಬಳಿಕ ಮಾತನಾಡಿದ ಕರಣ್​, ನನ್ನ ಮಾತಿನ ಅರ್ಥ ಏನೆಂದರೆ, ನೀವು ಈ ಹಿಂದೆ ಇಬ್ಬರು ಸಹೋದರರ ಜೊತೆ ಡೇಟಿಂಗ್​ ಮಾಡಿದ್ದಿರಿ. ನಮ್ಮ ಮೂವರ ನಡುವೆ ಇರುವ ಸಾಮಾನ್ಯತೆ ಏನೆಂದರೆ, ನಾನಿದ್ದ ಕಟ್ಟಡದಲ್ಲಿ ಆ ಸಹೋದರರು ವಾಸಿಸುತ್ತಿದ್ದರು ಎಂದು ಕರಣ್ ಹೇಳಿದರು. ಇದರಿಂದ ಸಾರಾ ಮತ್ತು ಜಾಹ್ನವಿ ಚಕಿತರಾದರು.
 
ಯಾವಾಗ ಕರಣ್​ ಈ ವಿಚಾರ ಪ್ರಸ್ತಾಪಿಸಿದರೋ ಸಾಮಾಜಿಕ ಜಾಲತಾಣದಲ್ಲಿ ಆ ಇಬ್ಬರು ಸಹೋದರರು ಯಾರು ಎಂಬ ಹುಡುಕಾಟ ಶುರುವಾಯಿತು. ಕೊನೆಗೂ ಆ ಇಬ್ಬರು ಸಹೋದರರನ್ನು ಹುಡುಕಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪೋಸ್ಟ್​ ಮಾಡಿದ್ದಾರೆ.
 
ಆ ಇಬ್ಬರು ಸಹೋದರರು ಯಾರು ಅಂದರೆ, ವೀರ್​ ಪಹಾರಿಯ ಮತ್ತು ಶಿಖರ್​ ಪಹಾರಿಯ. ಇವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶಿಲ್​ ಕುಮಾರ್​ ಶಿಂಧೆ ಅವರ ಮೊಮ್ಮಕ್ಕಳು. ಜಾಹ್ನವಿ ಮತ್ತು ಸಾರಾ ಜೊತೆ ಇವರಿಬ್ಬರು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೀರ್​ ಪಹಾರಿಯ ಜೊತೆ ಸಾರಾ ಅಲಿ ಖಾನ್​ ಮತ್ತು ಶಿಖರ್​ ಪಹಾರಿಯ ಜತೆ ಜಾಹ್ನವಿ ಕಪೂರ್​ ಡೇಟಿಂಗ್​ ಮಾಡಿದ್ದರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ. ಈ ವಿಚಾರವಾಗಿ ಸಾರಾ ಮತ್ತು ಜಾಹ್ನವಿ ಹಾಗೂ ಇಬ್ಬರು ಸಹೋದರರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಬಾಲಿವುಡ್​ನಲ್ಲಿ ಮಾತ್ರ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸಂಬಂಧ ಹದಗೆಟ್ಟ ಬಳಿಕ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ : ಸುಪ್ರೀಂ