ಗಾಂಜಾ ದಂಧೆಯಲ್ಲಿ ಸಂಪಾದಿಸಿದ್ದ ಹಣದಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪುಷ್ಪಾಪುರದ ಕುಖ್ಯಾತ ಗಾಂಜಾ ಪೂರೈಕೆದಾರ ಜಿ.ಮಲ್ಲೇಶ್ ಎಂಬಾತ ಖರೀದಿಸಿದ್ದ .50 ಲಕ್ಷ ಮೌಲ್ಯದ 8 ಎಕರೆ ಕೃಷಿ ಭೂಮಿಯನ್ನು ಸಿಸಿಬಿ ಮುಟ್ಟುಗೋಲು ಹಾಕಿಕೊಂಡಿದೆ.
ಬೆಂಗಳೂರಿನ ಪೊಲೀಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಡ್ರಗ್‌್ಸ ಸರಬರಾಜುದಾರನ ಆಸ್ತಿ ಮುಟ್ಟುಗೋಲು ಹಾಕಿದ ಪ್ರಕರಣ ಇದಾಗಿದೆ. ನಾಲ್ಕು ವರ್ಷದ ಹಿಂದೆ ಮಲ್ಲೇಶ್ ವಿರುದ್ಧ ದಾಖಲಾಗಿದ್ದ ಡ್ರಗ್‌್ಸ ದಂಧೆ ಪ್ರಕರಣದ ತನಿಖೆ ವೇಳೆ ಆಸ್ತಿ ಸಂಪಾದನೆ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಇನ್‌ಸ್ಪೆಕ್ಟರ್ ಬಿ.ಎಸ್.ಅಶೋಕ್ ವರದಿ ಆಧರಿಸಿ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ಮಲ್ಲೇಶ್‌ಗೆ ಸೇರಿದ ಭೂಮಿ ಜಪ್ತಿ ಮಾಡಲಾಗಿದೆ. ಇದೇ ರೀತಿ 2021ರಲ್ಲಿ ಬಿಹಾರ ಮೂಲದ ಪೆಡ್ಲರ್‌ನಿಗೆ ಸೇರಿದ ಜಿಗಣಿ ಬಳಿ .1 ಕೋಟಿ ಮೌಲ್ಯದ ಫ್ಲ್ಯಾಟನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು.