Publish Date: Fri, 08 Jul 2022 (14:27 IST)
Updated Date: Fri, 08 Jul 2022 (16:30 IST)
ಶಾಲೆಗೆ ಹೊರಟ್ಟಿದ್ದ ತಾಯಿ-ಮಗ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ ಹಾಸನದ ಬಿ.ಟಿ.ಕೊಪ್ಪಲು ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಸೀಮಾ ಮತ್ತು ಇವರ ಪುತ್ರ ಮಯೂರ(10) ಮೃತ ದುರ್ದೈವಿಗಳು. ಮಗನನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಸೀಮಾ ಕರೆದೊಯ್ಯುತ್ತಿದ್ದರು.
ಮಾರ್ಗಮಧ್ಯೆ ಯಮನಂತೆ ಬಂದ ಲಾರಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ತಾಯಿ-ಮಗ ದುರಂತ ಅಂತ್ಯ ಕಂಡಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.